ಕುಂದಾಪುರ ಮಿರರ್ ಸುದ್ದಿ…
ಬೈಂದೂರು :ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ಕ್ಷೇತ್ರದ ಅಭಿವೃದ್ದಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅವಧಿಯಲ್ಲಿ ಹೆಚ್ಚಿನ ಅನುದಾನಗಳು ಬಂದಿದೆ. ರಾಷ್ಟ್ರೀಯ ಹೆದ್ದಾರಿ, ಸೇತುವೆ, ಬಂದರುಗಳ ಅಭಿವೃದ್ಧಿ, ಪ್ರವಾಸೋದ್ಯಮದ ಅಭಿವೃದ್ದಿಗೆ ವೇಗ ಸಿಕ್ಕಿದೆ. ಬೈಂದೂರು ಕ್ಷೇತ್ರದಲ್ಲಿನ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೆ ಇನ್ನಷ್ಟು ಶಕ್ತಿ ದೊರಕಿಸಿಕೊಡಬೇಕು ಎನ್ನುವ ಹಿನ್ನೆಲೆಯಲ್ಲಿ ನಿನ್ನೆ ಕೇಂದ್ರ ಪ್ರವಾಸೋದ್ಯಮ ಸಚಿವರು ಭೇಟಿ ನೀಡಿ, ಇಲ್ಲಿನ ನೈಸರ್ಗಿಕ ಸೊಬಗನ್ನು ಮೆಚ್ಚಿಕೊಂಡಿದ್ದಾರೆ. ಒಟ್ಟಾರೆಯಾಗಿ ಇಡೀ ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ನಾವು ಬದ್ದರಿದ್ದೇವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಅವರು ಶುಕ್ರವಾರ ಉಪ್ಪುಂದದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬೈಂದೂರಿಗೆ ಹಾದು ಹೋಗುವ ರಸ್ತೆಗಳನ್ನು, ಮಲೆನಾಡು ಮತ್ತು ಕರಾವಳಿಗೆ ರಸ್ತೆಯನ್ನು ಬೆಸೆಯುವ ಹೆದ್ದಾರಿಯಾಗಿ ಪರಿವರ್ತನೆ ಮಾಡಿರುವ ಪ್ರತಿಫಲ, ಹೊಸನಗರದಿಂದ ಬೈಂದೂರು ರಸ್ತೆ ಹೆದ್ದಾರಿಯಾಗಿ ವಿಶೇಷವಾಗಿ ಕಳಸವಳ್ಳಿ ಸಿಗಂದೂರು ಸೇತುವೆ, ಮಲೆನಾಡಿನಿಂದ ಕರಾವಳಿಗೆ ಬರಲು, ಕೊಲ್ಲೂರು ಮೂಕಾಂಬಿಕ ದೇವಸ್ಥಾನ, ಸಿಗಂದೂರು, ಮುರ್ಡೇಶ್ವರ, ಭಟ್ಕಳಕ್ಕೆ ಹತ್ತಿರವಾಗಿ ಸಂಪರ್ಕ ಕಲ್ಪಿಸುವ ಕೆಲಸ ಆಗಿದೆ. ಒಂದು ಗ್ರಾಮ ಪಂಚಾಯತ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಿ ಕೇಂದ್ರದಿಂದ 500 ಕೋಟಿ ತಂದು, ಕೇಬಲ ಸ್ಟೆ ಸೇತುವೆಯನ್ನು 4 ವರ್ಷದಲ್ಲಿ ಮುಗಿಸುವ ಕೆಲಸ ಆಗಿದೆ. ಈ ಐತಿಹಾಸಿಕ ಸೇತುವೆಯನ್ನು ಪ್ರಧಾನಿ ನರೇಂದ್ರ ನರೇಂದ್ರ ಮೋದಿಯವರ ಮೂಲಕವೇ ಉದ್ಘಾಟನೆ ಮಾಡಲಾಗುವುದು ಎಂದರು.
ಹೊಸನಗರದಿಂದ ಬೈಂದೂರು ಮಾರ್ಗದಲ್ಲಿ 223 ತಿರುವು ಇದೆ. ಕಿ.ಮೀ 30 ಕಿಮೀ ಆಗುತ್ತಿತ್ತು ಪ್ರಯಾಣಕ್ಕೆ ತುಂಬಾ ಸಮಯವಾಗುತ್ತಿತ್ತು. ಈ ಮಾರ್ಗವನ್ನು ಸರಳಗೊಳಿಸುವ ನಿಟ್ಟಿನಲ್ಲಿ ಶರವಾತಿ ನದಿಗೆ ಎರಡು ಸೇತುವೆ ನಿರ್ಮಾಣದ ಯೋಜನೆ ರೂಪಿಸಿದೆವು.ಹೊಸನಗರ ಮಾವಿನಕೊಪ್ಪದಿಂದ 100 ಮೀಟರ್ ದೂರದಲ್ಲಿ 1.5 ಸೇತುವೆಯನ್ನು ನಿರ್ಮಾಣ ಮಾಡುವ ಕಾರ್ಯ ಮುಗಿಯುವ ಹಂತದಲ್ಲಿದೆ. ಮುಂದೆ ಶರಾವತಿ ಹಿನ್ನೀರು ಪ್ರದೇಶದಲ್ಲಿ ಬ್ಯಾಕೋಡಿ ಸೇತುವೆ ನಿರ್ಮಾಣವಾಗುತ್ತಿದೆ. ಇದರಿಂದ ಕೇವಲ 15 ನಿಮಿಷದಲ್ಲಿ ಆಡುಗೋಡಿಗೆ ಬಂದು ಸೇರಬಹುದು. ಎಲ್ಲ ರಸ್ತೆಗಳ ಅಭಿವೃದ್ದಿ ಕಾರ್ಯ ಆಗುತ್ತಿದೆ. ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ ನಿರ್ಮಾಣ ಯೋಜನೆ ಇದೆ. ಕೇಂದ್ರ ಪ್ರವಾಸೋದ್ಯಮ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ನಿನ್ನೆ ಮರವಂತೆ ಬೀಚ್, ಸೋಮೇಶ್ವರ ಒತ್ತಿನಣೆ, ಕೊಲ್ಲೂರು ದೇವಸ್ಥಾನದ ಅಭಿವೃದ್ಧಿ ವೀಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಯೋಜನೆ ರೂಪಿಸಲು ದೆಹಲಿಗೆ ಬರುವಂತೆ ತಿಳಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸೌಕೂರು, ಸಿದ್ಧಾಪುರ ಏತ ನೀರಾವರಿ ಯೋಜನೆ ಮಂಜೂರಾಗಿತ್ತು. ಸೌಕೂರು ಏತ ನೀರಾವರಿ ಯೋಜನೆ ಕಾರ್ಯಗತವಾಗಿದೆ. ಬಂದರುಗಳ ಅಭಿವೃದ್ಧಿ ಕಾರ್ಯ ಆಗುತ್ತಿದೆ. ಸರಕಾರ ಯಾವುದೇ ಇದ್ದರೂ ಕೂಡಾ ಅಭಿವೃದ್ದಿಗೆ ತೊಂದರೆಯಾಗಿಲ್ಲ, ಜಲಜೀವನ ಮಿಷನ್ ಕಾಮಗಾರಿ ಅರ್ಧಂಬರ್ಧ ಆಗಿದೆ, ಕೆಲಸ ವೇಗವಾಗಬೇಕು, ಕೇಂದ್ರ ಪುರಸ್ಕೃತ ವಿಶ್ವಕರ್ಮ ಯೋಜನೆಯ ಫಲಾನುಭವಿಗಳ ಗುರುತಿಸಿ ಸಾಲ ಕೊಡಿಸಿ ಸ್ವಾವಲಂಬನೆಗೆ ಒತ್ತು ನೀಡುವ ಕೆಲಸ ಮಾಡುತ್ತಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಕುಂದಾಪುರದಿಂದ ಬೈಂದೂರು ತನಕ ಅಂಡಾರ್ ಪಾಸ್ ನಿರ್ಮಾಣ, ಸರ್ವಿಸ್ ರಸ್ತೆ, ಹಾಗೂ ರಸ್ತೆಯನ್ನು ಸಮರ್ಪಕಗೊಳಿಸಲು ಸೂಚನೆ ನೀಡಲಾಗಿದೆ. ಬೈಂದೂರು ಕೊಲ್ಲೂರು ರಸ್ತೆಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಶಾಸಕ ಗುರುರಾಜ ಗಂಟಿಹೊಳೆ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಸುರೇಶ ಶೆಟ್ಟಿ ಬಿ.ಎಸ್., ಕೃಷ್ಣಪ್ರಸಾದ್ ಅಡ್ಯಂತಾಯ, ಗೋವಿಂದ ಬಾಬು ಪೂಜಾರಿ, ಶರತ್ ಶೆಟ್ಟಿ ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು.











