ಕೋಟದ ಪಂಚವರ್ಣ ಸಂಘಟನೆ 254ನೇ ವಾರದ ಪರಿಸರಸ್ನೇಹಿ ಅಭಿಯಾನ,ಕೊಮೆ ಬೀಚ್ ಕ್ಲಿನಿಂಗ್

0
457

Click Here

Click Here

ಸಮುದ್ರ ಒಡಲು ಮಲಿನಗೊಳಿಸದಿರಿ – ರೇವತಿ ತೆಕ್ಕಟ್ಟೆ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸಮುದ್ರ ತಟದಲ್ಲಿ ಸಾಕಷ್ಟು ತ್ಯಾಜ್ಯಗಳು ದಡಕ್ಕೆ ಸೇರಿಕೊಂಡಿದೆ. ಈ ಅವ್ಯವಸ್ಥೆ ಕಾರಣ ಮುನುಕುಲ ಆದ್ದರಿಂದ ಪರಿಸರದ ಬಗ್ಗೆ ಕಾಳಜಿ ವಹಿಸಿ ಸಮುದ್ರತಟಗಳನ್ನು ಮಲಿಗೊಳಿಸದಿರಿ ಎಂದು ತೆಕ್ಕಟ್ಟೆ ಗ್ರಾ.ಪಂ ಎಸ್ ಎಲ್ ಆರ್ ಎಂ ಘಟಕದ ಸಂಯೋಜಕಿ ರೇವತಿ ತೆಕ್ಕಟ್ಟೆ ಅಭಿಪ್ರಾಯಪಟ್ಟರು.

Click Here

ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಕೋಟ ಜೆಸಿಐ ಸಿನಿಯರ್ ಲಿಜನ್, ತೆಕ್ಕಟ್ಟೆ ಗ್ರಾ.ಪಂ., ಎಸ್ ಎಲ್ ಆರ್ ಎಂ ಘಟಕ ಇವರ ಸಹಯೋಗದೊಂದಿಗೆ 254ನೇ ಭಾನುವಾರ ಪರಿಸರಸ್ನೇಹಿ ಅಭಿಯಾನದ ಪ್ರಯುಕ್ತ ತೆಕ್ಕಟ್ಟೆ ಗ್ರಾಮಪಂಚಾಯತ್ ಕೊಮೆ ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಸ್ವಚ್ಛತಾ ಸಂದೇಶ ನೀಡಿ ಪ್ಲಾಸ್ಟಿಕ್ ಬಳಕೆ ವಿಪರೀತಗೊಂಡಿದೆ. ಅದನ್ನು ಎಸೆಯುವ ಮನಸ್ಥಿತಿ ಅತಿಯಾಗಿದೆ. ಇದರ ದುಷ್ಪರಿಣಾಮ ಪ್ರಸ್ತುತ ದಿನಗಳಲ್ಲಿ ಅನುಭವಿಸುತ್ತಿದ್ದೇವೆ, ಆದರೂ ಮನುಕುಲ ನಿರ್ಲಕ್ಷ್ಯ ತೊರುತ್ತಿದೆ. ಈ ಬಗ್ಗೆ ಜಾಗೃತರಾಗುವುದು ಒಳಿತು ಇಲ್ಲವಾದರೆ ಅವನತಿ ಕಟ್ಟಿಟ್ಟ ಬುತ್ತಿ ಎಂದರಲ್ಲದೆ ಪಂಚವರ್ಣದ ನಿರಂತರ ಪರಿಸರ ಕಾಳಜಿ ಇತಿಹಾಸ ಸೃಷ್ಠಿಸಲಿದೆ ಎಂದರು.

ಕೋಟ ಪಂಚವರ್ಣ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾಮಂಡಲದ ಅಧ್ಯಕ್ಷೆ ಶೋಭಾ ಗಣೇಶ್ ಪಡುಕರೆ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಸಂಚಾಲಕಿ ಸುಜಾತ ಬಾಯರಿ, ಕಾರ್ಯದರ್ಶಿ ವಸಂತಿ ಹಂದಟ್ಟು, ಜೆಸಿಐ ಸಂಸ್ಥೆಯ ಕೇಶವ ಆಚಾರ್, ಪಂಚವರ್ಣ ಉಪಾಧ್ಯಕ್ಷ ದಿನೇಶ್ ಆಚಾರ್, ಗಿರೀಶ್ ಆಚಾರ್, ಭಾಸ್ಕರ್ ದೇವಾಡಿಗ, ಕೃಷ್ಣ ಕಾಂಚನ್, ಸಿದ್ಧಾರ್ಥ, ಕಶ್ವಿ,ಸಾನಿಕಾ, ಕೊಮೆ ಹಾಲು ಉತ್ಪಾದಕರ ಸಹಕಾರ ಸಂಘದ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು. ಗೀತಾನಂದ ಫೌಂಡೇಶನ್ ಸಹಕಾರ ನೀಡಿತು.

Click Here

LEAVE A REPLY

Please enter your comment!
Please enter your name here