ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಮಳೆಗಾಲದ ತಯಾರಿಗೆ ವೇಗ ನೀಡಿದೆ. ಪ್ರತಿ ವರ್ಷ ಮಳೆಗಾಲ ಬಂತೆಂದರೆ ನೀರು ಸರಾಗವಾಗಿ ಹರಿಯಲು ವಿವಿಧ ತೋಡುಗಳನ್ನು ಹೂಳೆತ್ತುವ ಹಾಗೂ ಗಿಡಗಂಟಿಗಳನ್ನು ತೆರವು ಕಾರ್ಯಕ್ಕೆ ವೇಗ ನೀಡಿದೆ. ಈ ಹಿನ್ನಲ್ಲೆಯಲ್ಲಿ ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಅಧ್ಯಕ್ಷತೆಯಲ್ಲಿ ಸಮರೋಪಾಧಿ ಕಾರ್ಯಗಳು ನಡೆಯುತ್ತಿದೆ.
ಮಂಗಳವಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ,ಅಧ್ಯಕ್ಷ ಸತೀಶ್ ಕುಂದರ್ ವಿವಿಧ ಭಾಗಗಳ ಹೂಳೆತ್ತುವ ಕಾಮಗಾರಿಗಳನ್ನು ವಿಕ್ಷೀಸಿ ಮಳೆಗಾಲದ ಸಮಸ್ಯೆಗಳಿಗೆ ಮುಕ್ತಿಗಾಣಿಸುತ್ತಿದ್ದಾರೆ.











