ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಕದಕಟ್ಟೆ ಇಲ್ಲಿನ ಅಂಗನವಾಡಿ ಕೇಂದ್ರದ ಶಿಕ್ಷಕಿಯಾಗಿದ್ದ ಶ್ಯಾಮಲಾ ದೇವಾಡಿಗ ಅವರು ವಯೋನಿವೃತ್ತಿ ಹೊಂದುತ್ತಿರುವ ಸಲುವಾಗಿ ಹಳೆ ವಿದ್ಯಾರ್ಥಿಗಳ ಸಂಘ ಹಾಗು ಶಾಲಾಭಿವೃದ್ಧಿ ಸಮಿತಿ ಅಂಕದಕಟ್ಟೆ ಮತ್ತು ಅಂಕದಕಟ್ಟೆ ಫ್ರೆಂಡ್ಸ್ ಅಂಕದಕಟ್ಟೆ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಿದ್ದರು.
ಕಾರ್ಯಕ್ರಮದ ವೇದಿಕೆಯ ಉಪಸ್ಥಿತ ಗಣ್ಯರೆಲ್ಲರು ಮಾತನಾಡಿ ಶ್ಯಾಮಲಾ ದೇವಾಡಿಗ ಅವರ ನಲವತ್ತೊಂದು ವರ್ಷಗಳ ನಿಸ್ವಾರ್ಥ ಸೇವೆಯನ್ನು ಸ್ಮರಿಸಿಕೊಂಡು ಅವರ ನಿವೃತ್ತಿ ಬದುಕು ಸುಖಕರವಾಗಿರಲೆಂದು ಆಶಿಸಿ ಗೌರವಯುತವಾಗಿ ಸನ್ಮಾನಿಸಿ ಬೀಳ್ಕೊಟ್ಟರು.
ವಿವಿಧ ಮಹಿಳಾ ಸಂಘದವರು ಅರಶಿನ ಕುಂಕುಮ ಶಾಸ್ತ್ರದ ಮೂಲಕ ಅವರಿಗೆ ಗೌರವ ಸೂಚಿಸಿದ್ದು ಬಹಳ ವಿಶೇಷವಾಗಿತ್ತು.
ಕಾರ್ಯಕ್ರಮದ ವೇದಿಕೆಯಲ್ಲಿ ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಗಿಣಿ ದೇವಾಡಿಗ, ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಇದರ ಪ್ರವರ್ತಕ ವಸಂತ್ ಗಿಳಿಯಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಬು ಪೈ, ಅಂಕದಕಟ್ಟೆ ಫ್ರೆಂಡ್ಸ್ ಅಂಕದಕಟ್ಟೆ ಅಧ್ಯಕ್ಷ ಹರೀಶ್ ಪೂಜಾರಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಲಲಿತಾ, ನಿವೃತ್ತ ಮುಖ್ಯೋಪಾಧ್ಯಾಯಿನಿ ನಿರ್ಮಲಾ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೃಷ್ಣ ಗೊಲ್ಲ, ಸದಸ್ಯರಾದ ಲೋಕೇಶ್ ಅಂಕದಕಟ್ಟೆ, ಸುರೇಶ್ ದೇವಾಡಿಗ, ರಾಜಶೇಖರ್ ಶೆಟ್ಟಿ, ರಾಯ್ಸನ್ ಡಿಮೆಲ್ಲೊ, ಅಂಗನವಾಡಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಫಿಲೋಮಿನಾ ಫರ್ನಾಂಡಿಸ್, ಉದ್ಯಮಿಗಳಾದ ರಾಜೇಶ್ ಉಡುಪ, ಕೃಷ್ಣಯ್ಯ ಜೋಗಿ, ರೂಪಾ ಪೈ, ಹಳೆ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.
ಸುಮಲತಾ ಸಂಗ್ರಾಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಸನ್ಮಾನ ಪತ್ರ ವಾಚಿಸಿದರು, ರಕ್ಷಿತಾ ಧನ್ಯವಾದ ಸಮರ್ಪಿಸಿದರು.











