ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಎಮ್.ಪ್ರಭಾಕರ್ ಶೆಟ್ಟಿ ನಿಧನ

0
339

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇಲ್ಲಿನ ಐತಿಹಾಸಿಕ ಪ್ರಸಿದ್ಧ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಮ್.ಪ್ರಭಾಕರ್ ಶೆಟ್ಟಿ(65) ಬುಧವಾರ ಸಂಜೆ ಹೃದಯಘಾತದಿಂದ ನಿಧನರಾದರು.

Click Here

ಕೋಟೇಶ್ವರದ ಪ್ರತಿಷ್ಟಿತ ರೋಟರಿ ಸಂಸ್ಥೆಯ ಸ್ಥಾಪಕ ಸದಸ್ಯರಾಗಿ ರೋಟರಿ ಅಸಿಸ್ಟೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸಿ ತಮ್ಮದೇ ಆದ ಸಾಮಾಜಿಕ ಸೇವೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಹಾಗೂ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಸತತ 2 ಅವಧಿಗೆ ಅಧ್ಯಕ್ಷರಾಗಿ ದೇವಳದಲ್ಲಿ ಧ್ವಜಮರ ಪ್ರತಿಷ್ಠೆ ಹಾಗೂ ಜೀಣೋದ್ಧಾರ ಕಾರ್ಯ ಸೇರಿದಂತೆ ಬಹುತೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದರು. ಸ್ಥಳೀಯ ಹಲವು ಸಂಘ ಸಂಸ್ಥೆಗಳಲ್ಲಿ ಗೌರವಾಧ್ಯಕ್ಷರಾಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿದ ಇವರು ಬೀಜಾಡಿ ಗೋಪಾಡಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾಗಿದ್ದರು.

ಇವರು ತಾಯಿ, ಪತ್ನಿ, ಪುತ್ರ, ಪುತ್ರಿಯರನ್ನು ಸೇರಿದಂತೆ ಸಹೋದರ ಸಹೋದರಿಯರನ್ನು ಅಗಲಿದ್ದಾರೆ. .

Click Here

LEAVE A REPLY

Please enter your comment!
Please enter your name here