ಕುಂದಾಪುರ :ಪ್ರಧಾನಮಂತ್ರಿ ‘ಸೂರ್ಯ ಘರ್’ ಯೋಜನೆ ಮಾಹಿತಿ ಕಾರ್ಯಾಗಾರ ಮತ್ತು ಸವಲತ್ತು ವಿತರಣೆ

0
495

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು ಒಂದು ಕೋಟಿ ಮನೆಗಳ ಮೇಲೆ ಸೌರ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ವಿದ್ಯುತ್ ಬಿಲ್ ವೆಚ್ಚವನ್ನು ಶೂನ್ಯಕ್ಕಿಳಿಸುವುದು, ವಿದ್ಯುತ್ ಸ್ವಾವಲಂಬನೆ ಸಾಧಿಸುವ ಉದ್ದೇಶ ಹೊಂದಿದೆ. ಸೌರ ಸಾಮಾಥ್ರ್ಯ ಕಿಲೋ ವ್ಯಾಟ್ ಆಧಾರದಲ್ಲಿ ಸಬ್ಸಿಡಿ ವ್ಯವಸ್ಥೆಯಿದ್ದು ರೂ.78,000 ತನಕ ಸಬ್ಸಿಡಿ ಪಡೆಯಬಹುದಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜು ರೋಟರಿ ಕಲಾ ಮಂದಿರಲ್ಲಿ ನಡೆದ ಪುರಸಭೆ ಕುಂದಾಪುರ, ಪ್ರಧಾನಮಂತ್ರಿ ‘ಸೂರ್ಯ ಘರ್’ ಯೋಜನೆ ಮಾಹಿತಿ ಕಾರ್ಯಾಗಾರ ಮತ್ತು ಸವಲತ್ತು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Click Here

ಜಿಲ್ಲೆಯಲ್ಲಿ 5464 ಅರ್ಜಿಗಳು ಬಂದಿದ್ದು ಈಗಾಗಲೇ 643 ಕುಟುಂಬಗಳಿಗೆ ಸೌರ ವಿದ್ಯುತ್ ಅಳವಡಿಕೆ ಮಾಡಲಾಗಿದೆ. 73 ಕುಟುಂಬಗಳಿಗೆ ಸಬ್ಸಿಡಿ ದೊರಕಿದೆ. ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ 17 ಫಲಾನುಭವಿಗಳಿಗೆ ಸಬ್ಸಿಡಿ ಹಂಚಿಕೆ ಪಡೆದುಕೊಂಡಿದ್ದಾರೆ. ಕುಂದಾಪುರ ತಾಲೂಕಲ್ಲಿ 172 ಕುಟುಂಬಗಳಿಗೆ ಅಳವಡಿಕೆ ಮಾಡಲಾಗಿದ್ದು 142 ಮಂದಿ ಸಬ್ಸಿಡಿ ಪಡೆದಿದ್ದಾರೆ ಎಂದರು. ‘ಸೂರ್ಯ ಘರ್’ ಯೋಜನೆ ಸಬ್ಸಿಡಿ ವಿತರಣೆ, ಮಾಹಿತಿ ಕಾರ್ಯಕ್ರಮ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿಯೇ ಪ್ರಥಮವಾಗಿ ನಡೆಯುತ್ತಿರುವುದು ವಿಶೇಷ. ಈ ಯಶಸ್ಸಿನಲ್ಲಿ ಶ್ರಮಿಸಿದ ಶಾಸಕರು ಹಾಗೂ ಪುರಸಭೆ ಅಧ್ಯಕ್ಷರು ಹಾಗೂ ಅಧಿಕಾರಿ ವರ್ಗದವರು ಅಭಿನಂದನಾರ್ಹರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ ಅವರು, ‘ಸೂರ್ಯ ಘರ್’ ಸೌರ ವಿದ್ಯುತ್ ಯೋಜನೆ ದೀರ್ಘಾವಧಿ ಯೋಜನೆ. 25 ವರ್ಷಗಳ ಬಾಳಿಕೆ ಬರುತ್ತದೆ. ಗರಿಷ್ಠ ಮಟ್ಟದಲ್ಲಿ ವಿದ್ಯುತ್ ಉಳಿತಾಯವಾಗುತ್ತದೆ. ಉಳಿಕೆ ಸೌರ ವಿದ್ಯುತ್ತನ್ನು ವಿದ್ಯುತ್ ಜಾಲಕ್ಕೆ ಮಾರಾಟ ಮಾಡಬಹುದು. ಮುಂದಿನ ದಿನಗಳಲ್ಲಿ ಈ ಯೋಜನೆ ಹೆಚ್ಚು ಪರಿಣಾಮಕಾರಿಯಾಗಲಿದ್ದು ಹಸಿರು ಇಂಧನವಾದ್ದರಿಂದ ಬೇಡಿಕೆ ಹೆಚ್ಚಲಿದೆ. ಎಲ್ಲರೂ ಈ ಯೋಜನೆಯನ್ನು ಅನುಷ್ಟಾನ ಮಾಡಿಕೊಳ್ಳುವುದು ಉತ್ತಮ ಎಂದರು.

ಕಾರ್ಯಕ್ರಮದಲ್ಲಿ 17 ಮಂದಿ ಫಲಾನುಭವಿಗಳಿಗೆ ಸಬ್ಸಿಡಿಯ ಪ್ರಮಾಣ ಪತ್ರ ಹಸ್ತಾಂತರಿಸಲಾಯಿತು. ಪುರಸಭೆ ಅಧ್ಯಕ್ಷರಾದ ಮೋಹನದಾಸ ಶೆಣೈ, ಉಪಾಧ್ಯಕ್ಷೆ ವನಿತಾ ಎಸ್ ಬಿಲ್ಲವ, ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ., ಪುರಸಭೆ ಮುಖ್ಯಾಧಿಕಾರಿ ಆನಂದ ಜೆ., ಸೆಲ್ಕೊ ಡಿಜಿಎಂ ಗುರುಪ್ರಸಾದ್ ಶೆಟ್ಟಿ, ಲೀಡ್ ಬ್ಯಾಂಕ್ ಮೆನೇಜರ್ ಹರೀಶ್ ಉಪಸ್ಥಿತರಿದ್ದರು.

ಸುರೇಂದ್ರ ಕಾಂಚನ್ ಪ್ರಾರ್ಥನೆ ಮಾಡಿದರು.‘ಸೂರ್ಯ ಘರ್’ ಯೋಜನೆಯ ಅನುಷ್ಟಾನದ ನಾಮನಿರ್ದೇಶನ ಸದಸ್ಯ ಶೇಖರ ಪೂಜಾರಿ ಸ್ವಾಗತಿಸಿದರು. ಶಿವಾನಂದ ಶೆಟ್ಟಿ ಅನಿಸಿಕೆ ಹಂಚಿಕೊಂಡರು. ಪುರಸಭೆಯ ಮಾಜಿ ನಾಮನಿರ್ದೇಶನ ಸದಸ್ಯ ರತ್ನಾಕರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Click Here

LEAVE A REPLY

Please enter your comment!
Please enter your name here