ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸಮುದಾಯ ಆರೋಗ್ಯ ಕೇಂದ್ರ ಕೋಟ ಇಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ ಮತ್ತು ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಜಂಟಿಯಾಗಿ ಇಸಿಜಿ ಯಂತ್ರ ಹಸ್ತಾಂತರ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಯಂತ್ರವನ್ನು ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ ಕೃಷ್ಣ ಕಾಂಚನ್ ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಾಧವ ಪೈಯವರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾಗಿ ರೋಟರಿ ಕ್ಲಬ್ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ವಹಿಸಿ ಮಾತನಾಡಿ ನಮ್ಮ ಊರು, ನಮ್ಮ ಶಾಲೆ, ನಮ್ಮ ಆರೋಗ್ಯ ಕೇಂದ್ರ ಮತ್ತು ನಮ್ಮ ಸಹಕಾರಿ ಸಂಘ ಒಂದಾಗಿ ರೋಟರಿಯಂತಹ ಸಂಸ್ಥೆ ಸಹಕಾರದಿಂದ ಸೇವೆ ನೀಡಿದಲ್ಲಿ ಜನರಿಗೆ ಸಹಕಾರ ಆಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಸಹಕಾರಿ ಸಂಘ ಉಪಾಧ್ಯಕ್ಷ ನಾಗರಾಜ್ ಹಂದೆ, ಸಿಇಓ ಶರತ್ ಕುಮಾರ್ ಶೆಟ್ಟಿ, ವೈದ್ಯರಾದ ಡಾ.ವಿಶ್ವನಾಥ್ ಉಪಸ್ಥಿತರಿದ್ದರು.
ಕ್ಲಬ್‍ನ ಮಾಜಿ ಅಧ್ಯಕ್ಷರಾದ ದೇವಪ್ಪ ಪಟಗಾರ ಕಾರ್ಯಕ್ರಮ ನಿರೂಪಿದರು. ಸದಸ್ಯರಾದ ಅಚ್ಚುತ ಪೂಜಾರಿ, ಕುಸುಮ, ಬಸವ ಪೂಜಾರಿ, ರಾಜೇಶ್ ಉಪಸ್ಥಿತರಿದ್ದರು.











