ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಹಳ್ನಾಡಿನ ತುಳಸಿ ವಿದ್ಯಾಮಂದಿರ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವನ್ನು ವಿಶೇಷವಾಗಿ ಆಚರಿಸಲಾಯಿತು. ಮೊದಲ ದಿನ ಶಾಲೆಗೆ ಆಗಮಿಸಿದ ಮಕ್ಕಳಿಗೆ ಶಾಲಾ ಮುಖ್ಯೋಪಾಧ್ಯರು ಹಾಗೂ ಶಿಕ್ಷಕ ವೃಂದದವರು ಆರತಿಯನ್ನು ಬೆಳಗಿ, ತಿಲಕವನ್ನಿಟ್ಟು, ಹೂವನ್ನು ಸಿಂಪಡಿಸಿ, ಪ್ರತಿಯೊಂದು ಮಗುವಿಗೂ ಉಡುಗೊರೆಯೊಂದಿಗೆ ಸಿಹಿತಿನಿಸನ್ನು ನೀಡಿ ಸ್ವಾಗತಿಸಿದರು.











