ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ದಂಧೇ ನಡೆಯುತ್ತಿರುವುದು ಬಹಿರಂಗಗೊಂಡಿದೆ. ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದು ಲಕ್ಷಾಂತರ ಮೌಲ್ಯದ ಡ್ರಗ್ಸ್ ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಉಡುಪಿ ಜಿಲ್ಲೆಯ ಕಾಪು ತಾಲೂಕಿನ 10ನೇ ಕ್ರಾಸ್, ಸುಭಾಸ್ ನಗರ ನಿವಾಸಿ ಮೊಹಮ್ಮದ್ ಎಂಬುವರ ಮಗ ಮುದಾಸ್ಸಿರ್ (23) ಹಾಗೂ ಉಡುಪಿ ಜಿಲ್ಲೆಯ ಉದ್ಯಾವರ, ಬೋಳಾರಗುಡ್ಡೆಯ ಲೋಬೊ ವಿಲ್ಲಾ ನಿವಾಸಿ ಅನಿಲ್ ಲೋಬೋ ಎಂಬುವರ ಮಗ ಅಡೆನ್ ಲೋಬೋ (18) ಎಂದು ಗುರುತಿಸಲಾಗಿದೆ.
ಜೂನ್ 4ರ ಬುಧವಾರ ಸಂಜೆ ಕುಂದಾಪುರ ಕಸಬಾ ಗ್ರಾಮದ ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪ ಇಬ್ಬರು ವ್ಯಕ್ತಿಗಳು ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಕುಂದಾಪುರ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿದಾಗ ಆರೋಪಿಗಳಾದ ಮುದಾಸ್ಸಿರ್ ಹಾಗೂ ಆಡೆನ್ ಲೋಬೋ ಇಬ್ಬರು ಗಿರಾಕಿಗಳಿಗಾಗಿ ಕಾಯುತ್ತಿದ್ದರು. ಪೊಲೀಸರನ್ನು ನೋಡೊದ ಆರೋಪಿಗಳನ್ನು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವರನ್ನು ಬಂಧಿಸಲಾಯಿತು. ಬಳಿಕ ವಿಚಾರಿಸಿದಾಗ ಎಂಡಿಎಂಎ ಎಂಬ ಡ್ರಗ್ಸ್ ಮಾರಾಟ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.
ಬಂಧಿತ ಆರೋಪಿಗಳಿಂದ ಅಂದಾಜು ಎರಡು ಲಕ್ಷದ ನಲವತ್ತೊಂಭತ್ತು ಸಾವಿರದ ನಾನೂರ ನಲವತ್ತೊಂಭತ್ತು ರೂಪಾಯಿ ಮೌಲ್ಯದ 124.72 ಗ್ರಾಂ ಎಂಡಿಎಂಎ, ಪಿ. ಒರಾಕಲ್ ಎಂಬ ಹೆಸರಿನ ಪ್ಲಾಸ್ಟೀಕ್ ಬಾಕ್ಸ್, ಒಂಭತ್ತು ಇನ್ಸುಲಿನ್ ಸಿರಿಂಜ್, ENER-MECH ಎಂಬ ಕಪ್ಪು ಬ್ಯಾಗ್, Fresh ಎಂಬ ಪ್ಲಾಸ್ಟೀಕ್ ಬಾಕ್ಸ್, 2 ವೇಯಿಂಗ್ ಮೇಶಿನ್, 20 ಸಣ್ಣ ಸಣ್ಣ ಸ್ಟೀಲ್ ಡಬ್ಬ ಮತ್ತು 2 ಸ್ಟೀಲ್ ಚಮಚ ಇರುವ ಒಂದು ಪ್ಲಾಸ್ಟೀಕ್ ಬಾಕ್ಸ್, 36 ಪ್ಲಾಸ್ಟೀಕ್ ಜಿಪ್ ಲಾಕ್ ಕವರ್, ಒಂದು Allen Solly Exclusive ಮೆಟಲ್ ಬಾಕ್ಸ್, 4540/ ರೂ ನಗದು, 1 ಡ್ರಾಗನ್ ಚೂರಿ, 1 OPPO ಮೊಬೈಲ್, 2 ಸ್ಯಾಮ್ಸಂಗ್ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.