ಜೂ.6ರಿಂದ 8ರ ತನಕ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ‘ನೀರಿನೊಟ್ಟಿಗೆ’ ವಿನೂತನ ಕಾರ್ಯಕ್ರಮ

0
143
filter: 0; fileterIntensity: 0.0; filterMask: 0; captureOrientation: 0;?brp_mask:0;?brp_del_th:null;?brp_del_sen:null;?delta:null;?module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 47;

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಎಫ್.ಎಸ್.ಎಲ್ ಇಂಡಿಯಾ, ಡಾ.ಟಿ.ಎಂ.ಎ ಪೈ ಪೀಠ, ಮಣಿಪಾಲ್ ಕೇಂದ್ರ (ದ್ವೀಪ) ಮಾಹೆ ಬೆಂಗಳೂರು ಇವರ ಸಹಯೋಗದಲ್ಲಿ ‘ನೀರಿನೊಟ್ಟಿಗೆ’ ಎನ್ನುವ ಕುಂದಾಪುರ ಪಂಚಗಂಗಾವಳಿ ಭಾಗದ ನದಿ, ಜನಜೀವನ, ಪಕ್ಷಿ, ಪರಿಸರ, ಪ್ರಕೃತಿ- ಸಂಸ್ಕೃತಿಯೊಂದಿಗಿನ ಅನುಬಂಧವನ್ನು ಉಳಿಸಿಕೊಳ್ಳುವ ಸ್ಥಳೀಯ ಜನಸಮುದಾಯದೊಡನೆಯ ಮಾತುಕತೆ ಜೂನ್ 6ರಿಂದ ಜೂನ್ 8ರ ತನಕ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಎಫ್.ಎಸ್.ಎಲ್ ಇಂಡಿಯಾದ ರಾಕೇಶ್ ಸೋನ್ಸ್ ಹೇಳಿದರು.

ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಶೋಧನ ತಂಡ ಈ ನೀರಿನ ವಿಷಯದಲ್ಲಿ ಅಧ್ಯಯನ ಮಾಡುತ್ತಿದ್ದು ಕುಂದಾಪುರ ಪಂಚಗಂಗಾವಳಿ ನದಿ, ನದಿ ತಟದ ಜನಜೀವನ, ಪ್ರಕೃತಿ ಸಂಪತ್ತು, ಆಚರಣಾ ಕ್ರಮಗಳು, ನೀರಿನ ಸಂರಕ್ಷಣೆಯ ವಿಚಾರದಲ್ಲಿ ಅಧ್ಯಯನ ಮಾಡುತ್ತಿದೆ. ಸ್ಥಳ ಮತ್ತು ಪ್ರಾಕೃತಿಕ ಸಂಸ್ಕøತಿಗಳ ಮರುಗಳಿಕೆ, ಸಾಂಸ್ಕೃತಿಕ ಆಚರಣೆಗಳು ಮತ್ತು ಅಂತರಪೀಳಿಗೆಯ ಕೂಡುಕೊಂಡಿಯ ಪೋಷಣೆ, ಜೀವನೋಪಾಯ ಮತ್ತು ಪರಿಸರ ವ್ಯವಸ್ಥೆಯ ಪರಸ್ಪರ ಅವಲಂಬನೆ, ಶಿಕ್ಷಣ ಮತ್ತು ಭವಿಷ್ಯದ ಸಾರ್ವಜನಿಕ ನೀತಿರಚನೆಗಳ ಮೇಲಿನ ಸವಾಲುಗಳ ಬಗ್ಗೆ ನೀರಿನೊಟ್ಟಿಗೆ ಕಾರ್ಯಕ್ರಮದಲ್ಲಿ ಬೆಳಕು ಚೆಲ್ಲಲಿದೆ ಎಂದರು.

Click Here

Click Here

ಪ್ರೊ.ಡಾ.ದೀಪ್ತ ಸತೀಶ್ ಮಾತನಾಡಿ, ನೀರಿನ ಬಗ್ಗೆ ಜಾಗೃತಿ ಮೂಡಿಸುವುದು, ನದಿ, ನದಿ ತೀರ, ನೀರಿನ ಬಗ್ಗೆ ಅಧ್ಯಯನ, ಹವಾಮಾನದ ಬದಲಾವಣೆ ಸಂದರ್ಭದ ವಿಶ್ಲೇಷಣೆ, ನದಿ ಹಾಗೂ ನೀರನ್ನು ಅನುಸರಿಸಿಕೊಂಡು ಬದುಕುವ ಜನಜೀವನ ಇತ್ಯಾದಿಗಳ ಬಗ್ಗೆ ಅಧ್ಯಯನ ಮಾಡಿ ಡಾಕ್ಯುಮೆಂಟ್ ಸಿದ್ಧಪಡಿಸಲಾಗುತ್ತದೆ. ಈ ಮೂರುದಿನದ ಕಾರ್ಯಕ್ರಮದಲ್ಲಿ ಡಾ.ಟಿ.ಎಂ.ಎ ಪೈ ಕೇಂದ್ರದ ವತಿಯಿಂದ ಸಂಶೋಧನೆ-ಪರಿಸರ ಪರಿಣಾಮ ಪ್ರಭಾವಗಳ ನಿರೂಪಕ ಪ್ರದರ್ಶನ, ಪ್ರಕೃತಿಯೊಂದಿಗೆ ನಡಿಗೆ ಮತ್ತು ಸ್ಥಳೀಯ ಇತಿಹಾಸ ಪ್ರವಾಸ, ಚಿತ್ರ ಮತ್ತು ಚಿತ್ರೀಕರಣ ಸ್ಪರ್ಧೆ, ಸ್ಥಳೀಯ ಸಸ್ಯ ಪ್ರಾಣಿಸಂಕುಲಗಳ ದಾಖಲಾತಿ, ಕಥನ ಪ್ರಸಂಗ ಮತ್ತು ಮೌಖಿಕ ಚರಿತ್ರೆ, ಸಾಂಸ್ಕೃತಿಕ ಉತ್ಸವಗಳು ಇದರಲ್ಲಿ ಬೆಳಕು ಚೆಲ್ಲಲಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಪ್ರಕೃತಿ ಶಾಸ್ತ್ರಜ್ಞ ಪ್ರವೀಣ್ ಕುಮಾರ್ ಟಿ, ಸಂಶೋಧನ ತಂಡದ ಮಾಳವಿಕ ತಿವಾರಿ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here