ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸರಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುವ ಅಪೂರ್ವ ಅವಕಾಶ ನನಗೆ ಸಿಕ್ಕಿದ್ದು ಅದನ್ನು ಆತ್ಮ ತೃಪ್ತಿಯಿಂದ ಮಾಡಿದ್ದು ನನಗೆ ಬಹು ಖುಷಿ ಕೊಟ್ಟಿದೆ. ನನ್ನ ಸುಮಾರು ಮೂವತ್ತೆಂಟು ವರ್ಷಗಳ ಸೇವಾವಧಿಯಲ್ಲಿ ಹಲವರ ಸಹಕಾರ ಸಿಕ್ಕಿದ್ದು ನನ್ನ ಅದೃಷ್ಟ ಎಂದು ವಯೋನಿವೃತ್ತಿ ಹೊಂದಿದ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರದಲ್ಲಿ ಪ್ರಥಮ ದರ್ಜೆ ಸಹಾಯಕ ರಾಗಿ ವಯೋನಿವೃತ್ತಿ ಹೊಂದಿದ ಉದಯ ಅವರು ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ತಮ್ಮ ಅನಿಸಿಕೆಯನ್ನು ಅಭಿವ್ಯಕ್ತಿಸಿದರು.
ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಿಬ್ಬಂದಿಗಳು ಕರ್ತವ್ಯ ನಿಷ್ಠೆ ,ಪ್ರಾಮಾಣಿಕತೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಹಿರಿಯ ಶಿಕ್ಷಕ ಮಂಜುನಾಥ್ ಹೊಳ್ಳ ಮಾತನ್ನಾಡುತ್ತ ಉದಯ್ ಅವರ ಕೆಲಸದ ಮೇಲಿನ ಪ್ರೀತಿ, ಸಂಯಮಗಳು ನಮಗೆಲ್ಲಾ ಅನುಕರಣೀಯ. ಅವರ ಕರ್ತವ್ಯ ನಿಷ್ಠೆಯನ್ನು ನಾವು ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ. ಅವರ ನಿವೃತ್ತ ಜೀವನ ಉಲ್ಲಾಸದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪಪ್ರಾಂಶುಪಾಲ ಚಂದ್ರ ಶೇಖರ್ ಶೆಟ್ಟಿ ಅವರು ಸಂಸ್ಥೆಯಲ್ಲಿ ಅವರ ಸಮಯ ಮೀರಿದ ಕೆಲಸ, ಕಾರ್ಯ ದಕ್ಷತೆ, ಸಾರ್ವಜನಿಕ ಹಾಗೂ ಸಿಬ್ಬಂದಿಗಳೊಡನೆ ಸೌಜನ್ಯಯುತ ನಡವಳಿಕೆಯನ್ನು ಮನದುಂಬಿ ಪ್ರಶಂಸಿಸಿದರು. ಸಕುಟುಂಬ ಸಮೇತ ಶ್ರಿಯುತರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲರಾದ ಪ್ರಕಾಶ್ ಶೆಟ್ಟಿರವರು ಉಪಸ್ಥಿತರಿದ್ದು, ಅವರ ಸೇವಾ ತತ್ಪರತೆಯನ್ನು ಕೊಂಡಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಜಗದೀಶ್, ಅಧ್ಯಾಪಕರಾದ ಉದಯ್ ಮಡಿವಾಳ, ಎಂ. ನಾಗರತ್ನ,ಜಯಶ್ರೀ ಭಟ್ ಮಾತನಾಡಿದರು. ಅಧ್ಯಾಪಕ ರಮಾನಂದ ನಾಯಕ್ ಸನ್ಮಾನ ಪತ್ರ ವಾಚಿಸಿದರು. ದೈ.ಶಿ.ಶಿಕ್ಷಕ ಉದಯ ಮಡಿವಾಳ ಎಂ ಸ್ವಾಗತಿಸಿದರು. ದಿವ್ಯ ಪ್ರಭ ನಿರೂಪಿಸಿದರು. ರೇಷ್ಮಾ ಕುಮಾರಿ ವಂದಿಸಿದರು. ಸಮಾರಂಭದಲ್ಲಿ ಉಪನ್ಯಾಸಕರು, ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.