ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಈದುಲ್ ಅಝಾ(ಬಕ್ರೀದ್ ಹಬ್ಬ)ವನ್ನು ಜೂ.7 ಶನಿವಾರದಂದು ಸಂಭ್ರಮ ಸಡಗರದಿಂದ ಆಚರಿಸಿದರು.
ಮುಸ್ಲಿಂ ಬಾಂಧವರು ಬೆಳಿಗ್ಗೆ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಮಾಜ್ ಬಳಿಕ ಮುಸ್ಲಿಮ್ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಕುಂದಾಪುರ ಜಾಮೀಯಾ ಮಸೀದಿಯಲ್ಲಿ ಈದ್ ವಿಶೇಷ ಪ್ರಾರ್ಥನೆ, ದುವಾ ನೆರವೇರಿಸಿದ ಬಳಿಕ ಮೆರವಣಿಗೆ ನಡೆಸಲಾಯಿತು. ಜಾಮಿಯಾ ಮಸೀದಿಯ ಖತೀಬರಾದ ಶಾಹಿದ್ ಹುಸೇನ್, ಅಧ್ಯಕ್ಷರಾದ ವಸೀಮ್ ಬಾಷಾ, ಪುರಸಭೆ ಸದಸ್ಯ ಅಬು ಮಹಮ್ಮದ್, ತಬ್ರೇಜ್ ಜುಕಾಕೋ ಮೊದಲಾದವರಿದ್ದರು.