ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿಗೆ 1 ಕೆ ಜಿ ತೂಕದ ಚಿನ್ನದ ಮುಖವಾಡವನ್ನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದಾನಿ, ಉದ್ಯಮಿ ಡಾ. ಕೆ ಲಕ್ಷ್ಮೀನಾರಾಯಣ ಅವರು ಸಮರ್ಪಿಸಿದ್ದಾರೆ.
ಈ ಸಂದರ್ಭ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ ಬಾಬು ಶೆಟ್ಟಿ, ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಸಮಿತಿ ಸದಸ್ಯರಾದ ರಘುರಾಮ್ ದೇವಾಡಿಗ, ಮಹಾಲಿಂಗ ನಾಯ್ಕ್, ಸುಧಾ, ದೇವಳದ ಅರ್ಚಕ ಸುಬ್ರಮಣ್ಯ ಅಡಿಗ, ಕ್ಷೇತ್ರ ಪುರೋಹಿತ ಕೆ ನರಸಿಂಹ ಭಟ್ ಹಾಗೂ ಅರ್ಚಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.











