ಜುಲೈ 20 ರಂದು ಕುಂದಾಪುರದಲ್ಲಿ ಲಗೋರಿ – ಗ್ರಾಮೀಣ ಕ್ರೀಡಾ ಸಡಗರ

0
460

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಅಂಗವಾಗಿ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ವತಿಯಿಂದ ನಡೆಯುವ ‘ಲಗೋರಿ’ ಗ್ರಾಮೀಣ ಕ್ರೀಡಾ ಕೂಟದ ಪೂರ್ವಭಾವಿ ತಯಾರಿ ಸಭೆಯನ್ನು ಕಲಾಕ್ಷೇತ್ರ ಕಛೇರಿಯ ಪ್ರಕಾಶಾಂಗಣದಲ್ಲಿ ನಡೆಯಿತು. ಈ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸುವ ಕುರಿತು ದೈಹಿಕ ಶಿಕ್ಷಕರಾದ ಅರುಣ್ ಶೆಟ್ಟಿ, ಚಂದ್ರಶೇಖರ ಬೀಜಾಡಿ, ರಾಜಕೀಯ ಮುಂದಾಳು ವಿಕಾಸ್ ಹೆಗ್ಡೆ, ಸಾಹಿತ್ಯ ಪರಿಷತ್ತಿನ ಸುಬ್ರಹ್ಮಣ್ಯ ಶೆಟ್ಟಿ, ಲಯನ್ಸ್ ಪ್ರಮುಖರಾದ ರಾಜೀವ ಕೋಟ್ಯಾನ್, ರಮಾನಂದ ಗಾಣಿಗ ಮತ್ತು ಕ್ರೀಡಾ ಪಟು ಪ್ರದೀಪ್‌ಚಂದ್ರ ಶೆಟ್ಟಿಯವರು ಅಭಿಪ್ರಾಯವನ್ನು ಹಂಚಿಕೊoಡರು.

Click Here

ಜುಲೈ 20 ರಂದು ಕುಂದಾಪುರ ಬೋರ್ಡ್ ಹೈಸ್ಕೂಲಿನ ಮೈದಾನದಲ್ಲಿ ಬೆಳಿಗ್ಗೆ 9.೦೦ ಗಂಟೆಯಿಂದ ಈ ಕ್ರೀಡಾಕೂಟವು ಆರಂಭವಾಗಲಿದೆ. ಕಳೆದ ವರ್ಷ ನಡೆದಿದ್ದ ಈ ಕಾರ್ಯಕ್ರಮವು ಅತ್ಯಂತ ಯಶಸ್ಸನ್ನು ಕಂಡ ಹಿನ್ನೆಲೆಯಲ್ಲಿ ಈ ಬಾರಿ ಮತ್ತೊಮ್ಮೆ ಆಯೋಜಿಸಬೇಕು ಎನ್ನುವುದು ಸಂಸ್ಥೆಯ ಬಯಕೆಯಾಗಿದೆ. ಸದರಿ ಕ್ರೀಡಾಕೂಟವು ಯಾವ ಕ್ರೀಡೆಗಳನ್ನು ಒಳಗೊಂಡಿದೆ ಹಾಗೂ ಅದರ ವಿವಿರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಅಧ್ಯಕ್ಷ ಕಿಶೋರ್ ಕುಮಾರ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಕಲಾಕ್ಷೇತ್ರ ಸಂಸ್ಥೆಯ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಕ್ರೀಡಾಪಟುಗಳು, ರಾಜಕೀಯ ಧುರೀಣರು ಭಾಗವಹಿಸಿದ್ದರು.

Click Here

LEAVE A REPLY

Please enter your comment!
Please enter your name here