ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ನಾವು ಆರೋಗ್ಯವಾಗಿದ್ದರೆ ಭೂಮಿಯು ಆರೋಗ್ಯಕರವಾಗಿರುತ್ತದೆ. ನಮ್ಮ ಮನಸ್ಥಿತಿ ಹಾಗೂ ದೇಹ ಒಗ್ಗಟ್ಟಾಗಿದ್ದಾಗ ಏನ್ನಾನಾದರು ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಮ್ಮಲ್ಲಿರುವ ಸಾಮಥ್ರ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಬಹುದು. ಯೋಗ ಅಂದರೆ ಕೇವಲ ಆಸನ ಮಾತ್ರವಲ್ಲ ಅದರಲ್ಲಿ ವಿವಿಧ ಅಂಗಗಳಿದೆ. ಯೋಗಾಸನದಲ್ಲಿರುವ ಒಂದೊಂದು ಆಸವನ್ನು ನಾವು ಸರಿಯಾಗಿ ಕಲಿತು ಅಭ್ಯಾಸ ಮಾಡಿದರೆ ನಮ್ಮ ಮನಸ್ಸಿನಲ್ಲಿ ಶಾಂತತೆ ದೊರೆಯುತ್ತದೆ. ನಮ್ಮ, ಸಮಾಜದ ಹಾಗೂ ಪರಿಸರದ ಯೋಗ ಕ್ಷೇಮಕ್ಕೆ ಯೋಗ ಸಹಕಾರಿಯಾಗಿದ್ದು ಅದನ್ನು ಪ್ರತಿನಿತ್ಯ ಅಭ್ಯಸಿಸಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್. ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ಕುಂದಾಪುರ ಬಾರ್ ಅಸೋಸಿಯೇಶನ್, ಅಭಿಯೋಗ ಇಲಾಖೆ, ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ-2025ರ ಪ್ರಯುಕ್ತ ಕುಂದಾಪುರದ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ನಡೆದ ಯೋಗ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಮ್ ಹುಸೇನ್ ಶೇಖ್, ಸುಮಾರು 5 ಸಾವಿರ ಹಿಂದೆ ಪ್ರಾರಂಭವಾದ ಯೋಗ ಇಂದು ವಿಶ್ವದ ಎಲ್ಲೆಡೆ ಪಸರಿಸಿದೆ. ಯೋಗ ಎಂಬ ಶಬ್ದವು ಸಂಸ್ಕøತ ಅಕ್ಷರದಿಂದ ಜೋಡಣೆಯಾಗಿದೆ. ಯೋಗ ಜೀವನದ ಅವಿಭಾಜ್ಯ ಅಂಗ. ಇಂದಿನ ದಿನಗಳಲ್ಲಿ ಮನುಷ್ಯನಿಗೆ ಯೋಗ ತುಂಬಾ ಮುಖ್ಯವಾಗಿದೆ. ನಮ್ಮ ದೈನಂದಿನ ಒತ್ತಡ ಹಾಗೂ ಆತಂಕದಿಂದ ದೂರವಾಗಲು ಹಾಗೂ ದೈಹಿಕವಾಗಿ, ಮಾನಸಿಕವಾಗಿ ಸುದೃಢರಾಗಲು ಯೋಗ ಸಹಕಾರಿಯಾಗಿದೆ. ಪ್ರತಿನಿತ್ಯ ಯೋಗವನ್ನು ಮಾಡಿದರೆ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಾಣಲು ಮತ್ತು ಮನ:ಶಾಂತಿ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಕುಂದಾಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಕುಂದಾಪುರದ ಯೋಗ ಮತ್ತು ಪ್ರಕೃತಿ ಚಿಕಿತ್ಸಕಿ ಡಾ.ಕಾವ್ಯ ಹೆಗ್ಡೆ ಮಾಹಿತಿ ನೀಡಿದರು. ಯೋಗಗುರು ಕುಂದಾಪುರ ಟ್ರಾಫಿಕ್ ಪೊಲೀಸ್ ಠಾಣೆಯ ಹೆಡ್ ಕಾನ್ಸಸ್ಟೇಬಲ್ ಗುರುದಾಸ್ ಯೋಗ ತರಬೇತಿ ನೀಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ್ ಜಿ., ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶ್ರುತಿಶ್ರೀ ಎಸ್., ಸಹಾಯಕ ಸರಕಾರಿ ಅಭಿಯೋಜಕ ಉದಯ ಕುಮಾರ್ ಬಿ.ಎ, ಕುಂದಾಪುರ ಬಾರ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಗಿಳಿಯಾರು ಪ್ರಕಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಮತ್ತು ನ್ಯಾಯಿಕಾ ದಂಡಾಧಿಕಾರಿ ಮಂಜುಳ ಬಿ. ಸ್ವಾಗತಿಸಿದರು. ನ್ಯಾಯಾಲಯದ ಸಿಬ್ಬಂದಿ ಶ್ವೇತಾ ಕಾರ್ಯಕ್ರಮ ನಿರ್ವಹಿಸಿದರು.











