ಪಂಚವರ್ಣದ ಕಚೇರಿಯಲ್ಲಿ ವಿನೂತನ ಪರಿಸರಸ್ನೇಹಿ ಸೀಮಂತ ಶಾಸ್ತ್ರ ಕಾರ್ಯಕ್ರಮ ಆಯೋಜನೆ, ಚಿತ್ರನಟ ಎಸ್ ದೊಡ್ಡಣ ಪ್ರಶಂಸೆ

0
564

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ತನ್ನ ವಿನೂತನ ಕಾರ್ಯಕ್ರಮಗಳಿಂದ ಮನೆ ಮಾತಾಗಿ ಬೆಳೆದು ನಿಂತಿದೆ.
ಅದರಲ್ಲಿ ಪ್ರತಿ ಭಾನುವಾರ ಮುಂಜಾನೆ ಸ್ವಚ್ಛತಾ ಅಭಿಯಾನ,ಗಿಡನೆಟ್ಟು ಪೋಷಿಸುವ ಯೋಜನೆಗಳ ನಿರಂತರತೆಯಿಂದ ರಾಜ್ಯ, ದೇಶದಲ್ಲೆ ಸದ್ದಿಲ್ಲದೆ ಸದ್ದು ಮಾಡುತ್ತಿದೆ. ಕನ್ನಡ ರಾಜ್ಯೋತ್ಸವ ಅವಾರ್ಡ್,ಕುಂದಗನ್ನಡದ ಭಾಷಾಭಿಮಾನದ ಆಷಾಡಿ ಒಡ್ರ್, ಅನಾರೋಗ್ಯ ಪೀಡತರಿಗೆ ನೆರವು, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ, ಶಾಲಾ ಮಟ್ಟದಲ್ಲಿ ಪರಿಸರ ಜಾಗೃತಿ ಕಾರ್ಯಾಗಾರ, ಮಹಿಳಾ ಮಂಡಲದ ಅರಿವು ನೆರವು ಕಾರ್ಯಕ್ರಮ, ಆಧಾರ್ ಅಭಿಯಾನ, ರಕ್ತದಾನ, ಇಶ್ರಮ್ ಮೇಳ, ಇತರ ಹತ್ತು ಹಲವು ಕಾರ್ಯಕ್ರಮಳಿಂದ ಜನಮನ್ನಣೆ ಗಳಿಸಿಕೊಂಡಿದೆಯಲ್ಲದೆ ಪ್ರತಿಭಾನುವಾರದ ಪರಿಸರಸ್ನೇಹಿ ಅಭಿಯಾನಕ್ಕೆ 260ನೇ ಭಾನುವಾರದ ಸಂಭ್ರಮದ ನಡುವೆ ಸಮಾಜಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಈ ಸಂಘಟನೆ ಇದೀಗ ವಿನೂತನ ಕಾರ್ಯಕ್ರಮಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.

ಹುಟ್ಟು ಹಬ್ಬ ಕಾರ್ಯಕ್ರಮ, ನೆರವು
ಹೌದು ಸಂಘಟನೆಗಳು ಊರಿನ ಆಸ್ತಿಯಾಗಿ ಸಮಾಜಮುಖಿ ಚಿಂತನೆಗಳೊಂದಿಗೆ ನಿರಂತರ ಕ್ರೀಯಾಶೀಲತ್ವದಿಂದ ಸಮಾಜಕ್ಕೆ ದೊಡ್ಡ ಆಸ್ತಿಯಾಗಿ ಹೊರಹೊಮ್ಮಬೇಕು ಅದೇ ರೀತಿ ಪಂಚವರ್ಣ ಸಂಘಟನೆ ತನ್ನ ಸದಸ್ಯರ ಹುಟ್ಟು ಹಬ್ಬವನ್ನು ತನ್ನ ಕಛೇರಿಯಲ್ಲಿ ಸಂಭ್ರಮಿಸಿಕೊಳ್ಳುತ್ತಿರುವುದು ಅದೇ ರೀತಿ ಅದರ ಮೂಲಕ ಸಮಾಜದಲ್ಲಿ ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು,ಅನಾಥಾಶ್ರಮಗಳಿಗೆ ದಿನಸಿ ಪರಿಕರದ ಜತೆ ಇತರ ವಸ್ತುಗಳನ್ನು ನೀಡುವ ಯೋಜನೆಯನ್ನು ಹಮ್ಮಿಕೊಳ್ಳುತ್ತಿದೆ.

Click Here

ಜನಮನ್ನಣೆ ಗಳಿಸಿ ಸೀಮಂತ ಕಾರ್ಯಕ್ರಮ, ದೊಡ್ಡಣ್ಣ ಶ್ಲಾಫನೆ
ಸಂಘಟನೆಗಳು ಕುಟುಂಬದಂತೆ ಕಾರ್ಯನಿರ್ವಹಿಸಬೇಕೆಂಬ ದೃಷ್ಠಿಕೋನದಿಂದ ಒಂದಲ್ಲ ಒಂದು ರೀತಿಯ ವಿಭಿನ್ನ ಕಾರ್ಯಕ್ರಮಗಳನ್ನು ಈ ಸಮಾಜಕ್ಕೆ ನೀಡುತ್ತಾ ಬಂದಿರುವ ಪಂಚವರ್ಣ ಸಂಘಟನೆ ಇದೀಗ ಪಂಚವರ್ಣ ಮಹಿಳಾ ಮಂಡಲದ ಸದಸ್ಯರ ಸೀಮಂತ ಕಾರ್ಯಕ್ರಮವನ್ನು ಪರಿಸರಸ್ನೇಹಿ ಗಿಡ ನಡುವ ಮೂಲಕ ಅರ್ಥಪೂರ್ಣವಾಗಿಸಿಕೊಂಡಿದೆ. ಎಂಟು ತಿಂಗಳ ತುಂಬು ಗರ್ಭಿಣಿಯಾದ ಮಹಿಳಾಮಂಡಲದ ಸದಸ್ಯೆ ಅಕ್ಷತಾಳಿಗೆ ಎಂಟು ವಿವಿಧ ತರಹದ ಗಿಡಗಳನ್ನು ಅವಳ ಕೈಯಲ್ಲಿ ನೆಟ್ಟು ನೀರೇರೆವ ಕಾಯಕ ಶುಕ್ರವಾರದ ಶುಭದಿನದಂದು ನೆರವೆರಿಸಿಕೊಂಡಿತು. ಈ ಪರಿಸರಸ್ನೇಹಿ ಸೀಮಂತಕ್ಕೆ ಹಿರಿಯ ಚಿತ್ರನಟ ಎಸ್ ದೊಡ್ಡಣ್ಣ ಪ್ರಶಂಸಿ ಸಂಘಟನೆಗೆ ಕೃತಜತೆ ಸಲ್ಲಿಸಿದ್ದಾರೆ

ಸೀಮಂತದಲ್ಲಿ ಏನೆಲ್ಲ ವಿಶೇಷತೆ
ಸಾಮಾನ್ಯವಾಗಿ ಮನೆಯಲ್ಲೆ ಅಥವಾ ಸಭಾಂಗಣದಲ್ಲಿ ಆಯೋಜಿಸುವ ಸೀಮಂತ ಶಾಸ್ತ್ರದಂತೆ ಪಂಚವರ್ಣದ ಕಛೇರಿಯಲ್ಲಿ ಕುರ್ಚಿಯಲ್ಲಿ ಕುಳ್ಳಿರಿಸಿ ತಲೆಗೆ ತೆಂಗಿನ ಎಣ್ಣೆ ಸವರಿ, ತಲೆ ಬಾಚಿ, ಅರಸಿನ ಕುಂಕುಮ ಹಚ್ಚಿ, ಕೈಗೆ ಬಳೆ ತೊಡಿಸಿ, ಸೀರೆ ಉಡುಗೊರೆಯಾಗಿ ನೀಡಿ, ದೀಪಬೆಳಗಿಸಿ ವಿವಿಧ ತರಹದ ತಿಂಡಿ ಬಡಿಸಿ, ಆರತಿ ಬೆಳಗಿ ಸೋಬಾನೆ ಹಾಡು ಹಾಡಿ ಸಂಭ್ರಮಿಸಿಕೊಂಡರು. ಅಲ್ಲದೆ ಸೀಮಂತ ಶಾಸ್ತ್ರ ಮುಗಿದ ನಂತರ ಸಹೋದರ ತಲೆ ಮೇಲೆ ತಿಂಡಿ ಪೆಟ್ಟಿಗೆ ತಲೆಯ ಮೇಲೆ ಹೊತ್ತು ಕೊಂಡ್ಯೋಯುವ ದೃಶ್ಯ ವಿಶೇಷವಾಗಿ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಸದಸ್ಯೆ ಅಕ್ಷತಾಳ ತಂದೆ ಪ್ರಭಾಕರ ಕಾಂಚನ್, ತಾಯಿ ಮುಕಾಂಬಿಕಾ, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಸಂಚಾಲಕಿ ಸುಜಾತ ಬಾಯರಿ, ಕಾರ್ಯದರ್ಶಿ ವಸಂತಿ ಹಂದಟ್ಟು, ಉಪಾಧ್ಯಕ್ಷೆ ಸುಜಾತ ಕುಮಾರ್, ಪಂಚವರ್ಣದ ಕಾರ್ಯದರ್ಶಿ ನಿತೀನ್ ಕುಮಾರ್,ಪಂಚವರ್ಣದ ಪದಾಧಿಕಾರಿಗಳು,ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

Click Here

LEAVE A REPLY

Please enter your comment!
Please enter your name here