ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಟೀಮ್ ತ್ರಾಸಿ ಇದರ ವತಿಯಿಂದ ‘ಕೆಸರಿನಲ್ಲೊಂದು ದಿನ’ ಕಾರ್ಯಕ್ರಮ ತ್ರಾಸಿ ಗ್ರಾಮದ ಇಪ್ಪಿಬೈಲ್ ಬೊಬ್ಬರ್ಯ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಭಾನುವಾರ ವಿಶಿಷ್ಟವಾಗಿ ನಡೆಯಿತು.
ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ‘ಕೆಸರಿನಲ್ಲೊಂದು ದಿನ’ ಕಾರ್ಯಕ್ರಮದಲ್ಲಿ ತ್ರಾಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳು, ಮಹಿಳೆಯರು ಹಾಗೂ ಪುರುಷರು ಗದ್ದೆಗಳಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಡಿ ಸಂಭ್ರಮಿಸಿದರು. ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ಗೂಟಕ್ಕೆ ಸುತ್ತು ತಿರುಗಿ ಓಡುವ ಸ್ಪರ್ಧೆ, ಥ್ರೋಬಾಲ್, ವಾಲಿಬಾಲ್, ಓಟ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬಿಸಿಲು ಮಳೆಯ ನಡುವೆ ಸಾರ್ವಜನಿಕರು ಉತ್ಸಾಹದಿಂದ ಗದ್ದೆಗಿಳಿದು ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದರು. ತ್ರಾಸಿ ಗ್ರಾಪಂ ಅಧ್ಯಕ್ಷ ಮಿಥುನ್ ಎಂ.ಡಿ.ಬಿಜೂರು, ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ, ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಅಚಾರ್ಯ ತ್ರಾಸಿ, ತ್ರಾಸಿ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಟೀಮ್ ತ್ರಾಸಿ ಆಯೋಜಿಸಿದ್ದ ‘ಕೆಸರಿನಲ್ಲೊಂದು ದಿನ’ ವಿಶಿಷ್ಟವಾಗಿ ಮೂಡಿಬಂದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು..











