ಕುಂದಾಪುರ ಮಿರರ್ ಸುದ್ದಿ…
ಹೆಮ್ಮಾಡಿ: ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯಿಂದ ಪ್ರತಿ ವರ್ಷವೂ ಹೆಮ್ಮಾಡಿ ಭಟ್ರ ಬೆಟ್ಟು ರಸ್ತೆಯ ನಿವಾಸಿಗಳು ಹೊಳೆಯಂತಾಗುತ್ತಿದೆ ಹಲವು ಮನವಿ ನೀಡಿದರೂ ಪರಿಹಾರ ಮಾಡಿಲ್ಲ ಎಂದು ಸಿಪಿಎಂ ಮುಖಂಡ ಸಂತೋಷ್ ಹೆಮ್ಮಾಡಿ ಹೇಳಿದರು.
ಅವರು ಹೆಮ್ಮಾಡಿ ಗ್ರಾಮ ಪಂಚಾಯತ್ ಎದುರು ಸಿಪಿಎಂ ರಾಜಕೀಯ ಪ್ರಚಾರಾಂದೋಲನ ಭಾಗವಾಗಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಹೆಮ್ಮಾಡಿ ಆರೋಗ್ಯ ಉಪ ಕೇಂದ್ರ ವಾರಕ್ಕೊಮ್ಮೆ ಮಾತ್ರ ಬಾಗಿಲು ತೆರೆದಿರುತ್ತದೆ. ಸಾಂಕ್ರಮಿಕ ರೋಗ ಹರಡುವ ಸಂದರ್ಭದಲ್ಲಿ ಈ ಕೇಂದ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಮಾಡಿ ದಿನ ನಿತ್ಯ ವೈದ್ಯರು ಇರುವಂತೆ ಜಿಲ್ಲಾಡಳಿತ ಗಮನ ವಹಿಸಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ಬೇಡಿಕೆಗಳು
ಪ್ರಾಧೀಕಾರಕ್ಕೆ ನೀಡಿದ 9/11 ಗ್ರಾಮ ಪಂಚಾಯತ್ ಮೂಲಕವೇ ನೀಡಬೇಕು
ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ ಸರಿಪಡಿಸಬೇಕು, ಅಭಿವೃದ್ಧಿ ಹೊಂದುತ್ತಿರುವ ಹೆಮ್ಮಾಡಿ ಪೇಟೆಯ ನೀರು ಚರಂಡಿ ಮೂಲಕ ಹರಿದು ಹೋಗಲು ವ್ಯವಸ್ಥೆ ಮಾಡಬೇಕು, ತ್ಯಾಜ್ಯ ವಿಲೇವಾರಿಗೆ ಜಿಲ್ಲಾಡಳಿತ ಕ್ರಮವಹಿಸಬೇಕು
ನಿವೇಶನ ರಹಿತರಿಗೆ ನಿವೇಶನ ನೀಡಬೇಕು, ಹಕ್ಕುಪತ್ರ ವಂಚಿತ ಜನರಿಗೆ ಹಕ್ಕು ಪತ್ರ ನೀಡಬೇಕು
ಕಟ್ಟು ರಸ್ತೆಯಲ್ಲಿರುವ ಮೋರಿ ದುರಸ್ತಿಗೊಳಿಸಬೇಕು ಎಂಬ ಬೇಡಿಕೆಗಳನ್ನು ಗ್ರಾಮ ಪಂಚಾಯತ್ ಕಾರ್ಯದರ್ಶಿ ಅವರಿಗೆ ಮನವಿ ನೀಡಲಾಯಿತು.
ಪ್ರತಿಭಟನೆಯಲ್ಲಿ ನರಸಿಂಹ ದೇವಾಡಿಗ, ಜಗದೀಶ್ ಆಚಾರ್, ಶೇಖರ ದೇವಾಡಿಗ, ವಾಸುದೇವ ಇದ್ದರು.
ದೇವನಹಳ್ಳಿ ರೈತರ ಹೋರಾಟ ಬೆಂಬಲಿಸಿ ಮಾತನಾಡಿದರು ಮುಖ್ಯ ಮಂತ್ರಿಗಳು ಮದ್ಯೆ ಪ್ರವೇಶಿಸಿ ಭೂಮಿ ಸ್ವಾಧೀನ ಕೈ ಬಿಡಬೇಕು ಎಂದು ಆಗ್ರಹಿಸಿದರು.











