ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ಫ್ರೆಂಡ್ಸ್ ವತಿಯಿಂದ ಜೂ.27ರಂದು ಉಡುಪಿ ಜಿಲ್ಲಾ ಉಪ ನಿರ್ದೇಶಕರಾದ ಲೋಕೇಶ.ಸಿ. ಇವರನ್ನು ಉಪನಿರ್ದೇಶಕರ ಕಚೇರಿಯಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟೀಚರ್ ಕೋ ಅಪರೇಟಿವ್ ಬ್ಯಾಂಕಿನ ನಿಕಟ ಪೂರ್ವ ಅಧ್ಯಕ್ಷರಾದ ವಿ. ಸಂತೋಷ್ ಕುಮಾರ್ ಶೆಟ್ಟಿ, ಎ.ಪಿ.ಟಿ. ಪೆರ್ಡೂರು ಮುಖ್ಯ ಶಿಕ್ಷಕರಾದ ಸತೀಶ ಶೆಟ್ಟಿ, ಕುಂದಾಪುರ ವಲಯದ ಅನುದಾನಿತ ಪ್ರಾಥಮಿಕ ಶಾಲಾ ಸಂಘದ ವಲಯ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಭಂಡಾರಿ, ವೀರೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೆಂಜೂರು ಶಾಲೆಯ ಮುಖ್ಯ ಶಿಕ್ಷಕರಾದ ನವೀನ್ ಚಂದ್ರ ಶೆಟ್ಟಿ, ಪಿ.ಎಂ.ಶ್ರೀ.ಕುವೆಂಪು ಶಾಲೆಯ ಶಿಕ್ಷಕರಾದ ಸದಾನಂದ ಶೆಟ್ಟಿ ಮತ್ತು ವಂಡ್ಸೆ ಸಮೂಹ ಸಂಪನ್ಮೂಲ ವ್ಯಕ್ತಿ ಎಂ ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.











