ಜನಸ್ನೇಹಿ ಆಡಳಿತ ನೀಡಿದ ಅಧಿಕಾರಿ – ಆನಂದ್ ಕುಂದರ್ ಬಣ್ಣನೆ
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಆಡಳಿತ ವ್ಯವಸ್ಥೆಯಲ್ಲಿ ಜನಸ್ನೇಹಿ ಆಡಳಿತ ನೀಡುವ ಅಧಿಕಾರಿಗಳು ಬಲು ಅಪರೂಪ ಅದರಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸುರೇಶ್ ಬಂಗೇರರ ಕಾರ್ಯವೈಖರಿ ಉತ್ಕೃಷ್ಟವಾದದ್ದು ಎಂದು ಕೋಟದ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ ಕುಂದರ್ ಅಭಿಪ್ರಾಯಪಟ್ಟರು.
ಭಾನುವಾರ ಕೋಟ ಗ್ರಾಮಪಂಚಾಯತ್ ಹಾಗೂ ಸಿಬ್ಬಂದಿ ವರ್ಗ ಸ್ಥಳೀಯ ಸಂಘಸಂಸ್ಥೆಗಳ ವತಿಯಿಂದ ಕೋಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ನಿವೃತ್ತಿಹೊಂದಿದ ಸುರೇಶ್ ಬಂಗೇರ ಇವರಿಗೆ ಹಮ್ಮಿಕೊಂಡ ಬಿಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿ ಸಮಾಜದ ಒರೆ ಕೋರೆಗಳನ್ನು ಸಮನಾಗಿ ಸ್ವೀಕರಿಸಿ ಆಡಳಿತ ನಡೆಸುವುದೇ ದೊಡ್ಡ ಸವಾಲಿನ ಕಾರ್ಯ ಈ ನಿಟ್ಟಿನಲ್ಲಿ ಸುರೇಶ್ ಬಂಗೇರ ಎನ್ನುವ ಅಧಿಕಾರಿ ಸತತ ಏಳು ವರ್ಷ ಕೋಟದ ಅಭಿವೃದ್ಧಿಗೆ ಜೊತಕವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಪ್ರಶಂಸಿದರು.
ಕೋಟ ಪಂಚಾಯತ್ ವತಿಯಿಂದ ವಿಶೇಷವಾಗಿ ಗೌರವಿಸಿ ಅಭಿನಂದಿಸಿ ಬಿಳ್ಕೋಡುಗೆ ನೀಡಲಾಯಿತು.
ಕೋಟ ಪಂಚಾಯತ್ ಎಸ್ ಎಲ್ ಆರ್ ಎಂ ಘಟಕ, ಪಂಚಾಯತ್ ಸಿಬ್ಬಂದಿ ವರ್ಗ, ಗಿಳಿಯಾರು ಯುವಕ ಮಂಡಲ, ಪ್ರಕೃತಿ ಸಂಜೀವಿನಿ ಒಕ್ಕೂಟ, ಆಟೋ ಚಾಲಕ ಮಾಲಕರು, ಪಂಚಾಯತ್ ಆವರಣ ಸ್ಥಳೀಯ ಅಂಗಡಿ ಮುಂಗಟ್ಟು ಮಾಲಿಕರು, ಗಂಥಪಾಲಕರು ಕೋಟ,ಬಪಂಚವರ್ಣ ಸಂಘಟನೆ ಕೋಟ, ಕೋಟತಟ್ಟು ಗ್ರಾಮಪಂಚಾಯತ್ ವತಿಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಬ್ರಹ್ಮಾವರ ತಾಲೂಕು ಪಂಚಾಯತ್ ಇಒಎಚ್ ವಿ ಇಬ್ರಾಹಿಂಪುರ, ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಮೋಹನ್‍ರಾಜ್, ದ.ಕ ಜಿಲ್ಲಾ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ, ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವನಾಥ, ಕೋಟ ಪಂಚಾಯತ್ ಸದಸ್ಯರಾದ ಅಜಿತ್ ದೇವಾಡಿಗ, ಕೋಟ ಗ್ರಾಮ ಲೆಕ್ಕಿಗ ಚಲುವರಾಜು, ಪಂಚಾಯತ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಪಂಚಾಯತ್ ಸದಸ್ಯರಾದ ಚಂದ್ರ ಪೂಜಾರಿ ಸ್ವಾಗತಿಸಿ ಪರಿಚಯಿಸಿದರು. ಕಾರ್ಯದರ್ಶಿ ಶೇಖರ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮವನ್ನು ಹಂದಾಡಿ ಗ್ರಾ.ಪಂ ಕಾರ್ಯದರ್ಶಿ ಪೂರ್ಣಿಮಾ ಅಧಿಕಾರಿ ನಿರೂಪಿಸಿ ವಂದಿಸಿದರು.











