ಪಂಚವರ್ಣ 261ನೇ ವಾರದ ಪರಿಸರಸ್ನೇಹಿ ಹಸಿರು ಜೀವ ಅಭಿಯಾನ – ಕೋಟತಟ್ಟು ಪಡುಕರೆ ಹಾಲು ಡೈರಿಯಲ್ಲಿ ಆಯೋಜನೆ

0
433

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸಿದರೆ ಮುಂದಿನ ದಿನಗಳು ಹಸಿರು ಕ್ರಾಂತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕೆ.ಎಂ.ಎಫ್ ನಿರ್ದೇಶಕ ಕೆ.ಶಿವಮೂರ್ತಿ ಉಪಾಧ್ಯಾಯ ಹೇಳಿದರು.

ಕೋಟತಟ್ಟು ಪಡುಕರೆ ಡೈರಿಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ಜೆಸಿಐ ಸಿನಿಯರ್ ಲಿಜನ್ ಕೋಟ ಇವರ ಸಹಯೋಗದೊಂದಿಗೆ ಹಾಲು ಉತ್ಪಾದಕರ ಸಹಕಾರಿ ಸಂಘ ಕೋಟತಟ್ಟು ಪಡುಕರೆ ಇವರ ಸಂಯೋಜನೆಯೊಂದಿಗೆ ಗೀತಾನಂದ ಫೌಂಡೇಶನ್ ಮಣೂರು, ಸಮುದ್ಯತಾ ಗ್ರೂಪ್ಸ್ ಕೋಟ, ಅನ್ನಪೂರ್ಣ ನರ್ಸರಿ ಪೇತ್ರಿ, ಸುವರ್ಣ ಎಂಟರ್ಪ್ರೈಸ್ ಬ್ರಹ್ಮಾವರ ಇವರು ಕೊಡ ಮಾಡಿದ ಗಿಡಗಳನ್ನು ನಡುವ 261ನೇ ಭಾನುವಾರದ ಪರಿಸರಸ್ನೇಹಿ ಹಸಿರು ಜೀವ ಅಭಿಯಾನ ಕಾರ್ಯಕ್ರಮದಲ್ಲಿ ಗಿಡ ವಿತರಿಸಿ ಮಾತನಾಡಿ ಪ್ರಕೃತಿಗಾಗಿ ಪಂಚವರ್ಣ ಸಂಘಟನೆ ತನ್ನನ್ನು ತಾನು ಅರ್ಪಿಸಿಕೊಂಡಿದೆ. ಇದು ಶಬ್ದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಪ್ರಸ್ತುತ ಮನುಕುಲದಲ್ಲಿ ಈ ರೀತಿಯ ಸಾಮಾಜಿಕ ಸೇವೆ ಅಮೋಘವಾದದ್ದು ಎಂದು ಪರಿಸರಜಾಗೃತಿಯ ಬಗ್ಗೆ ತಿಳಿ ಹೇಳಿದರು.

ಇದೇ ವೇಳೆ ವಿವಿಧ ತಳಿಗಳ ಗಿಡಗಳನ್ನು ಪರಿಸರದ ಹಾಲು ಉತ್ಪಾದಕರಿಗೆ ವಿತರಿಸಲಾಯಿತು.

Click Here

ಪಂಚವರ್ಣ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಹಸಿರು ಜೀವ ಅಭಿಯಾನದ ಕುರಿತು ಮಾಹಿತಿ ನೀಡಿದರು.

ಕೋಟ ರಾಷ್ಟ್ರೀಯ ಹೆದ್ದಾರಿ ಮಣೂರು ಭಾಗದಲ್ಲಿ ಒಟ್ಟು 40 ಗಿಡಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಸತೀಶ್ ಹೆಚ್ ಕುಂದರ್, ಕೋಟ ಆರಕ್ಷಕ ಠಾಣೆಯ ಕಾನ್ಸ್‌ಟೇಬಲ್ ವಿಜಯ್ ಕುಮಾರ್, ನಿವೃತ್ತ ಬಿ.ಎಸ್.ಎನ್ ಎಲ್ ಅಧಿಕಾರಿ ವಿಷ್ಣುಮೂರ್ತಿ ಮಯ್ಯ,
ಪಂಚವರ್ಣ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಪಂಚವರ್ಣದ ಸದಸ್ಯ ಮಹೇಶ್ ಬೆಳಗಾವಿ ಸ್ವಾಗತಿಸಿ ಕಾರ್ಯಕ್ರಮವನ್ನು ಸಲಹಾ ನಿರೂಪಿಸಿ ವಂದಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

Click Here

LEAVE A REPLY

Please enter your comment!
Please enter your name here