ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ , ವಲಯ ಮಟ್ಟದ ಶೆಟಲ್ ಟೂರ್ನಮೆಂಟ್ ಹಂಗಳೂರು ಪರಿಸರದ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ ನಲ್ಲಿ ನೆರವೇರಿತು.
ಪಂದ್ಯಾಟವನ್ನು ಉದ್ಘಾಟಿಸಿದ ನಿವೃತ್ತ ಡಿ ವೈ ಎಸ್ ಪಿ ಖ್ಯಾತ ಬಾಡಿ ಬಿಲ್ಡರ್, ಕರಾವಳಿ ರತ್ನ ಪ್ರಶಸ್ತಿ ಪುರಸ್ಕೃತ ವೆಲೆಂಟೈನ್ ಡಿಸೋಜಾ , ದಿನನಿತ್ಯ ಕ್ರೀಡೆಯಲ್ಲಿ ದಿನಕ್ಕೊಂದು ಗಂಟೆ ವ್ಯವಿಸುವುದರಿಂದ ಜೀವನದಲ್ಲಿ ಸವಾಲು ಎದುರಿಸಲು ಸ್ಪೂರ್ತಿ ಸಿಗುತ್ತದೆ ಎಂದರು.
ಪುರುಷ ಮತ್ತು ಮಹಿಳೆಯರಿಗೆ ವಿವಿಧ ವಿಭಾಗದಲ್ಲಿ ಪ್ರಶಸ್ತಿಯನ್ನು ವಿತರಿಸಿದ ಸೈಂಟ್ ಪಿಯುಸ್ ಚರ್ಚಿನ ಧರ್ಮಗುರುಗಳಾದ ಅತಿ ವಂದನೀಯ ಆಲ್ಬರ್ಟ್ ಕ್ರಾಸ್ತಾ , ತಾನು ದಿನನಿತ್ಯ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರಲ್ಲಿ ಆಡುತ್ತಿದ್ದು , ರಾಷ್ಟ್ರೀಯ ಗುಣಮಟ್ಟದ ಬ್ಯಾಡ್ಮಿಂಟನ್ ಸೆಂಟರ್ ಇದಾಗಿದ್ದು ,ಉತ್ತಮ ಕೋಚಿಂಗ್ ವ್ಯವಸ್ಥೆಗಳು ಇದ್ದು , ಕ್ರೀಡಾ ಆಸಕ್ತರು ಉತ್ತಮ ಅವಕಾಶದ ಸದುಪಯೋಗ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಂಗಳೂರಿನ ಉದ್ಯಮಿ ವೃಂದಾ ಲೂವಿಸ್ ಸ್ಪರ್ಧೆ ಮತ್ತು ಜೀವನದಲ್ಲಿ ಸೋಲು- ಗೆಲುವು ಒಂದು ಅವಿಭಾಜ್ಯ ಅಂಗವಾಗಿದೆ. ಸಕಾರಾತ್ಮಕ ಕ್ರೀಡಾ ಮನೋಭಾವದಿಂದ ಜೀವನ ಉಲ್ಲಾಸದಾಯಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೋಸ್ಟಾ ಬ್ಯಾಡ್ಮಿಂಟನ್ ಕೋರ್ಟ್ ನ ಮಾಲಕರಾದ ಅಜಿತ್ ಡಿಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ ನ ಮೊದಲ ವರ್ಷದ ಸಂಭ್ರಮವನ್ನು ಕುಟುಂಬ ಸಮೇತ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.
ಪಂದ್ಯಾಟದಲ್ಲಿ ವಿವಿಧ ವಿಭಾಗಗಳಲ್ಲಿ ಟ್ರೋಫಿಯನ್ನು ಪಡುಕೋಣೆಯ ಆರನ್ ರೆಬೆರೋ, ಎಡ್ರಿಕ್ ರೆಬೆರೋ ಮತ್ತು ಪಡುಕೋಣೆಯ ವಿಲ್ಸನ್ ಒಲಿವೇರಾ, ಕೀರ್ತಿ ಕಿರಣ್ ಡಿಸೋಜಾ, ಹಂಗಳೂರಿನ ರೂತ್ ಕ್ವಾರ್ಡಸ್, ಡೆನ್ಸಿಲ್ ಡಿಸೋಜಾ, ಕುಂದಾಪುರದ ಡೆಪೋಡಿಲ್ ಕ್ರಾಸ್ಟೊ ಮತ್ತು ರೇಷ್ಮಾ ಡಿಸೋಜಾ ಪಡೆದರೆ , ರನ್ನರ್ಸ್ ಅಪ್ ಟ್ರೋಪಿಯನ್ನು ಕುಂದಾಪುರದ ವಿನೋದ್ ಕ್ರಾಸ್ಟೊ ಮತ್ತು ಮಿಲ್ಲರ್ ಡಿಸೋಜಾ , ಬೈಂದೂರಿನ ತಿಮೋತಿ ನಜರೆತ್, ಜೋಸ್ವಾ ಫೆರ್ನಾಂಡಿಸ್ , ಕುಂದಾಪುರದ ರೀಮಾ ಅಲ್ಮೇಡಾ , ಸ್ನೇಹಾ ಹಾಗೂ ಶೈಲಾ ಅಲ್ಮೇಡಾ, ಸುವರ್ಣ ಅಲ್ಮೇಡಾ ಪಡೆದರು.
ಸಭಾ ಕಾರ್ಯಕ್ರಮದಲ್ಲಿ ಕಥೋಲಿಕ್ ಸಭಾ ವಲಯ ಅಧ್ಯಕ್ಷರಾದ ರೇಮೀ ಫೆರ್ನಾಂಡಿಸ್ ಶುಭವನ್ನು ಕೋರಿ, ಅತಿವಂದನೀಯ ರಾಕ್ ಡಿ’ಕೋಸ್ಟ ಆಶೀರ್ವದಿಸಿದರು.
ಸ್ಪರ್ಧೆಗೆ ಆಗಮಿಸಿದ ಸರ್ವರನ್ನು ಕಥೋಲಿಕ್ ಸಭಾ ಕುಂದಾಪುರ ಘಟಕದ ಅಧ್ಯಕ್ಷ ವಿಲ್ಸನ್ ಅಲ್ಮೇಡಾ ಸ್ವಾಗತಿಸಿ , ಸಂಚಾಲಕರಾದ ಶೈಲಾ ಅಲ್ಮೇಡಾ ವಿಜೇತರ ಪಟ್ಟಿಯನ್ನು ವಾಚಿಸಿ , ಕಾರ್ಯದರ್ಶಿ ಶಾಂತಿ ಪಿಂಟೊ ವಂದಿಸಿದರು ಮತ್ತು ಸಂಚಾಲಕರದ ವಿನೋದ್ ಕ್ರಾಸ್ಟೊ ನಿರೂಪಿಸಿದರು.











