ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ 47ನೇ ಮಾಲಿಕೆ – ಹಿರಿಯ ಕೃಷಿಕರನ್ನು ಗುರುತಿಸುವ ಕಾಯಕ ಶ್ರೇಷ್ಠವಾದದ್ದು – ಸತೀಶ್ ಹೆಚ್ ಕುಂದರ್

0
336

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕೃಷಿ ಕ್ಷೇತ್ರದಲ್ಲಿ ಹಿರಿಯ ಕಾಯಕ ಜೀವಿಯನ್ನು ಗುರುತಿಸಿ ಗೌರವಿಸುವ ಪಂಚವರ್ಣದ ಕಾರ್ಯ ಶ್ಲಾಘನೀಯ ಎಂದು ಮಣೂರು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಹೆಚ್. ಕುಂದರ್ ಅಭಿಪ್ರಾಯಪಟ್ಟರು.

ಶುಕ್ರವಾರ ಕೋಟದ ಪಂಚವರ್ಣ ಯುವಕ ಮಂಡಲ ಇದರ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತ ಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಸ್ನೇಹಕೂಟ ಮಣೂರು ಇವರುಗಳ ಸಂಯುಕ್ತ ಸಹಯೋಗದೊಂದಿಗೆ ಪ್ರತಿ ತಿಂಗಳು ಸಾಧಕ ಕೃಷಿಕನನ್ನು ಗುರುತಿಸುವ ಸರಣಿ ಕಾರ್ಯಕ್ರಮ ‘ರೈತರೆಡೆಗೆ ನಮ್ಮ ನಡಿಗೆ’ ಮಾಲಿಕೆಗೆ ಇದೀಗ 47ರ ಸರಣಿಯ ಹಿನ್ನಲ್ಲೆಯಲ್ಲಿ, ಮಣೂರು ಸ್ನೇಹಕೂಟ ದಶಮ ಸಂಭ್ರಮದ ಪ್ರಯುಕ್ತ ಸಾಧಕ ಕೃಷಿಕರಾದ ಮಣೂರು ನಡುಬೆಟ್ಟು ಬಾಗಿ ಪೂಜಾರಿ ಇವರನ್ನು ಗೌರವಿಸಿ ಮಾತನಾಡಿ, ಸಮಾಜದಲ್ಲಿ ನಾನಾ ಕ್ಷೇತ್ರಗಳಿವೆ ಆದರೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವುದು ಬೆರಳೆಣಿಕೆ. ಈ ನಿಟ್ಟಿನಲ್ಲಿ ಪಂಚವರ್ಣ ಈ ನಿರಂತರ ರೈತ ಕಾಯಕ ಕಾರ್ಯಕ್ರಮ. ವಿಶೇಷವಾಗಿ ಜನಮನವನ್ನು ತಲುಪಿದ್ದು ಅದರಲ್ಲಿಯೂ ಮಣೂರಿನ ಬಾಗಿ ಪೂಜಾರಿ ಗೌರವಿಸಿ ಕೃಷಿಕರ ಗೌರವ ಹೆಚ್ಚಿಸಿದೆ ಎಂದರು.

ಸ್ನೇಹಕೂಟ ಮಣೂರು ಇದರ ಸಂಚಾಲಕಿ ಭಾರತಿ ವಿಷ್ಣುಮೂರ್ತಿ ಮಯ್ಯ ಮಾತನಾಡಿ ಸ್ನೇಹಕೂಟ ದಶಮ ಸಂಭ್ರಮಕ್ಕೆ ಈ ಕಾರ್ಯಕ್ರಮ ಅರ್ಪಿಸಿದ ಕ್ಷಣ ಸ್ನೇಹಕೂಟದ ಸಾಮಾಜಿಕ ಕಾರ್ಯಕ್ಕೆ ಮತ್ತಷ್ಟು ಶಕ್ತಿ ನೀಡಿದಂತ್ತಾಗಿದೆ ಎಂದರು.

Click Here

ಇದೇ ವೇಳೆ ಗಿಡ ನೆಟ್ಟು ಪರಿಸರ ಜಾಗೃತಿ ನೀಡಿ ಗೋ ಪೂಜೆ ನೆರವೆರಿಸಿ ಮಣೂರು ನಡುಬೆಟ್ಟು ಭಾಗಿ ಪೂಜಾರಿಯವರನ್ನು ಕೃಷಿ ಪರಿಕರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಪತ್ರಕರ್ತೆ ಅಕ್ಷತಾ ಗಿರೀಶ್, ಸ್ನೇಹಕೂಟ ಮಣೂರಿನ ನಿರ್ದೇಶಕ ವಿಷ್ಣುಮೂರ್ತಿ ಮಯ್ಯ, ಕೋಟ ಪಂಚಾಯತ್ ಸದಸ್ಯ ಶಿವರಾಮ ಶೆಟ್ಟಿ, ರೈತ ಧ್ವನಿ ಸಂಘದ ಉಪಾಧ್ಯಕ್ಷ ತಿಮ್ಮ ಕಾಂಚನ್ ಹರ್ತಟ್ಟು, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ,ಪಂಚವರ್ಣದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು. ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮವನ್ನು ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಶಿಸ್ತು ಸಮಿತಿ ಅಧ್ಯಕ್ಷ ಅಜಿತ್ ಆಚಾರ್ ವಂದಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವನೆ ಸಲ್ಲಿಸಿ ಸಂಯೋಜಿಸಿದರು.

Click Here

LEAVE A REPLY

Please enter your comment!
Please enter your name here