ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಕೃಷಿಯ ಅರಿವನ್ನು ಪಡೆದುಕೊಂಡರು. ಹಳ್ನಾಡಿನ ಸಮೀಪದ ಮೊಗವೀರ ಸಂಘಟನೆಯ ಅಧ್ಯಕ್ಷರು, ಕೃಷಿಕರಾದ ನಾಗೇಶ್ ಮೊಗವೀರ ಇವರ ಗದ್ದೆಯಲ್ಲಿ ಶನಿವಾರ ನಡೆದ ಪ್ರಾತ್ಯಕ್ಷಿಕೆಯಲ್ಲಿ 6, 7 ಮತ್ತು 8ನೇ ತರಗತಿ ಮಕ್ಕಳು ಭಾಗವಹಿಸಿ ಕೃಷಿ ಜ್ಞಾನ, ಪ್ರಸ್ತುತ ಕೃಷಿ ಭೂಮಿಯಲ್ಲಿ ರೈತರ ಸಮಸ್ಯೆ , ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳು ಮುಂತಾದ ಮಾಹಿತಿಗಳನ್ನು ತಿಳಿದುಕೊಂಡರು.
ಶಾಲಾ ಮುಖ್ಯ ಶಿಕ್ಷಕಿ ರೇಷ್ಮ ಪ್ರದೀಪ್ ಮುಂಚೂಣಿಯಲ್ಲಿ ಈ ಕೃಷಿ ಪ್ರಾತ್ಯಕ್ಷಿಕೆ ನಡೆಯಿತು. ಆಡಳಿತ ಮಂಡಳಿ ಸದಸ್ಯರು, ಶಿಕ್ಷಕೇತರ ಸಿಬ್ಬಂದಿ, ಹಾಗೂ ಶಿಕ್ಷಕರು ಈ ಪ್ರಾತ್ಯಕ್ಷಿಕೆಯಲ್ಲಿ ಮಕ್ಕಳ ಜೊತೆಯಲ್ಲಿದ್ದರು.
ಸುರಿಯುವ ಮಳೆಯ ನಡುವೆಯೂ ನಾಟಿ ಮಾಡುವ ಮೂಲಕ ಮಕ್ಕಳು ಕೃಷಿ ಸಂಭ್ರಮವನ್ನು ಅನುಭವಿಸಿದರು. ಶಾಲಾ ಆಟಪಾಠಗಳ ಜೊತೆ ನೈಜ ಬದುಕಿನಲ್ಲಿ ಕೃಷಿ ಕಲಿಕೆಯನ್ನು ಅರ್ಥಮಾಡಿಸುವ ನಿಟ್ಟಿನಲ್ಲಿ ಅನ್ನ ಮೂಲದ ಅರಿವನ್ನು ಮಕ್ಕಳಲ್ಲಿ ತಿಳಿಸಲು ತುಳಸಿ ವಿದ್ಯಾ ಸಂಸ್ಥೆಯು ಈ ಕೃಷಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.











