ಪಂಚವರ್ಣ ಮಹಿಳಾ ಮಂಡಲದ ಆಸಾಡಿ ಒಡ್ರ್ ಪೋಸ್ಟರ್ ಬಿಡುಗಡೆ

0
330

Click Here

Click Here

ಕುಂದಾಪ್ರ ಭಾಷೆ ಬದುಕಿನ ಸೊಗಡನ್ನು ಮುಂದಿನ ತಲೆಮಾರಿಗೆ ನೀಡಿ – ನರೇಂದ್ರ ಕುಮಾರ್ ಕೋಟ ಕರೆ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪ್ರ ಭಾಷೆ ಹಾಗೂ ಬದುಕಿನ ಸೊಗಡನ್ನು ಮುಂದಿನ ತಲೆಮಾರಿಗೆ ನೀಡಲು ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದು ಸಾಹಿತಿ, ಶಿಕ್ಷಕ ಕುಂದಗನ್ನಡ ಭಾಷಾ ಜ್ಞಾನಿ ನರೇಂದ್ರ ಕುಮಾರ್ ಕೋಟ ಕರೆ ನೀಡಿದರು.

ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃ ಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಇದೇ ಬರುವ ಅ. 10ರಂದು ಹಂದಟ್ಟು ಗೆಳೆಯರ ಬಳಗ ದಾನಗುಂದು ಸಭಾಂಗಣದಲ್ಲಿ ನಾಲ್ಕನೇ ವರ್ಷದ ಆಸಾಡಿ ಒಡ್ರ್ ಕಾರ್ಯಕ್ರಮದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿ ಭಾಷೆ ಹಾಗೂ ಜೀವನ ಪದ್ದತಿ ಮತ್ತು ಜನಾಂಗ ಇವುಗಳು ಅಳಿಯಬಾರದು ಇದಕ್ಕಾಗಿ ಪ್ರತಿ ಮನೆಯಲ್ಲಿ ನಮ್ಮ ಗ್ರಾಮ್ಯ ಭಾಷೆ ಬದುಕಿನ ರೀತಿ ನೀತಿಯನ್ನು ತಲೆಮಾರಿಗೆ ತಿಳಿಹೇಳುವ ತನ್ಮೂಲಕ ಅದರ ಉಳಿಯುವ ಕಾರ್ಯ ಮಾಡಬೇಕಿದೆ. ಇಂತಹ ಕಾರ್ಯಕ್ರಮ ನಿತ್ಯನಿರಂತರವಾಗಿ ಪ್ರತಿ ಊರಲ್ಲಿ ಪ್ರಜ್ವಲಿಸಲಿ ಎಂದು ಪಂಚವರ್ಣ ಮಹಿಳಾ ಮಂಡಲದ ಈ ಕಾರ್ಯಕ್ರಮವನ್ನು ಶ್ಲಾಘಿಸಿದರು.

Click Here

ಮುಖ್ಯ ಅಭ್ಯಾಗತರಾಗಿ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಪೂಜಾರಿ, ನ್ಯಾಯವಾದಿ ಟಿ. ಮಂಜುನಾಥ ಗಿಳಿಯಾರು, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ, ಏಜುಕೇರ್ ಸಂಸ್ಥೆಯ ಮುಖ್ಯಸ್ಥ ಚೇತನ್ ಬಂಗೇರ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ ಉಪಸ್ಥಿತರಿದ್ದರು.

ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಹಂದಟ್ಟು ಸ್ವಾಗತಿಸಿದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ನಿರೂಪಿಸಿದರು. ಸಂಚಾಲಕಿ ಸುಜಾತ ಬಾಯರಿ ವಂದಿಸಿದರು. ಪಂಚವರ್ಣದ ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು .

Click Here

LEAVE A REPLY

Please enter your comment!
Please enter your name here