ರಕ್ತಕ್ಕೆ ಪರ್ಯಾಯ ವ್ಯವಸ್ಥೆ ರಕ್ತದಾನ ಒಂದೇ ದಾರಿ – ಆನಂದ್ ಸಿ ಕುಂದರ್
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಈ ಜಗತ್ತಿನಲ್ಲಿ ಹುಟ್ಟಿಕೊಂಡಿಲ್ಲ. ಈ ದಿಸೆಯಲ್ಲಿ ಪ್ರತಿಯೊಬ್ಬರು ಅದರ ಮಹತ್ವ ಅರಿತು ರಕ್ತದಾನಕ್ಕೆ ಮುಂದಾಗಬೇಕು ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಕರೆ ನೀಡಿದರು.
ಭಾನುವಾರ ಗುಂಡ್ಮಿ ಕರಾವಳಿ ಮೊಗವೀರ ಸಭಾಭವನದಲ್ಲಿ ಸಾಲಿಗ್ರಾಮ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಸಾಲಿಗ್ರಾಮ ಘಟಕ ಹಾಗೂ ಮಹಿಳಾ ಸಂಘಟನೆ ಸಾಲಿಗ್ರಾಮ ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಉಡುಪಿ ರಕ್ತನಿಧಿ ಕೆ.ಎಂ.ಸಿ ಆಸ್ಪತ್ರೆ, ಮಣಿಪಾಲ ಹಾಗೂ ಜಿಲ್ಲಾಡಳಿತ ಉಡುಪಿ ಕರಾವಳಿ ಮೊಗವೀರ ಮಹಾಜನ ಸಂಘ ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಒಂದು ಯುನಿಟ್ ರಕ್ತದಿಂದ ನಾಲ್ಕು ಜೀವ ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಮೊಗವೀರ ಯುವ ಸಂಘಟನೆ ಜಿಲ್ಲೆಯಲ್ಲೆ ರಕ್ತದಾನಗೈದು ಹೊಸ ಭಾಷ್ಯ ಬರೆದಿದೆ. ಸಾಮಾಜಿಕ ಬದ್ಧತೆ ಪ್ರದರ್ಶಿಸುವುದರೊಂದಿಗೆ ಸಮುದಾಯದ ಏಳಿಗೆಗೆ ಮೊಗವೀರ ಯುವ ಸಂಘ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಸಭೆಯ ಅಧ್ಯಕ್ಷತೆಯನ್ನು ಮೊಗವೀರ ಯುವ ಸಂಘ ಸಾಲಿಗ್ರಾಮ ಘಟಕದ ಅಧ್ಯಕ್ಷ ಕಿರಣ್ ಕುಂದರ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಕೋಡಿ, ಪ್ರಧಾನಕಾರ್ಯದರ್ಶಿ ರವೀಂದ್ರ ಪುತ್ರನ್ ಬೆಳ್ಳಂಪಳ್ಳಿ, ಮಾಜಿ ಅಧ್ಯಕ್ಷರಾದ ಎಮ್ ಎಸ್ ಸಂಜೀವ, ರಾಜೇಂದ್ರ ಹಿರಿಯಡ್ಕ,ಘಟಕದ ಮಾಜಿ ಅಧ್ಯಕ್ಷರಾದ ಕೃಷ್ಣಮೂರ್ತಿ ಮರಕಾಲ, ಜಿಲ್ಲಾ ಘಟಕದ ರವೀಶ್ ಶ್ರೀಯಾನ್ ಕೊರವಡಿ, ಅಘೋರೇಶ್ವರ ಕಲಾರಂಗದ ಅಧ್ಯಕ್ಷ ನಿತ್ಯಾನಂದ ನಾಯರಿ, ಗಾಣಿಗ ಯುವ ಸಂಘದ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಲಕ್ಕಿ, ಜಿಲ್ಲಾಧ್ಯಕ್ಷ ದಿನೇಶ್ ಗಾಣಿಗ, ಗಜಾನನ ಮಿತ್ರ ಮಂಡಳಿ ತೋಡ್ಕಟ್ಟು ಅಧ್ಯಕ್ಷ ಕರುಣಾಕರ ಪೂಜಾರಿ, ಕೆಎಂಸಿ ರಕ್ತನಿಧಿಯ ಡಾ.ಕಾರ್ತಿಕ್, ಮೊಗವೀರ ಮಹಿಳಾ ಸಂಘಟನೆಯ ಅಧ್ಯಕ್ಷೆ ಶಾಲಿನಿ ಮತ್ತಿತರರು ಉಪಸ್ಥಿತರಿದ್ದರು.
ಮೊಗವೀರ ಯುವ ಸಂಘದ ಮಾಜಿ ಅಧ್ಯಕ್ಷ ಚಂದ್ರ ಬಂಗೇರ ಸ್ವಾಗತಿಸಿದರು. ಕಾರ್ಯಕ್ರಮವನ್ನು ರಾಜು ಕರಾವಳಿ ನಿರೂಪಿಸಿದರು. ಮಾಜಿ ಅಧ್ಯಕ್ಷ ಸತೀಶ್ ಮರಕಾಲ ವಂದಿಸಿದರು.
ಗಾಣಿಗ ಯುವ ಸಂಘಟನೆ ಕೋಟ ಶ್ರೀ ಅಘೋರೇಶ್ವರ ಕಲಾರಂಗ ಕಾರ್ತಟ್ಟು, ಚಿತ್ರಪಾಡಿ ಶ್ರೀ ಗಜಾನನ ಮಿತ್ರ ಮಂಡಳಿ ತೋಡಕಟ್ಟು ಪಾರಂಪಳ್ಳಿ ಸಹಕಾರ ನೀಡಿತು.











