ಕೋಟ :ಪಂಚವರ್ಣದ ಹಸಿರುಜೀವ 264ನೇ ಭಾನುವಾರ ಕಾರ್ಯಕ್ರಮ

0
586

Click Here

Click Here

ಮನುಕುಲ ಉಳಿಯಬೇಕಾದರೆ ಹಸಿರು ಅತ್ಯವಶ್ಯಕ- ಅಜಿತ್ ದೇವಾಡಿಗ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮನುಕುಲಕ್ಕೆ ಹಸಿರೇ ಯೋಗ್ಯವಾದ ವಾತಾವರಣ ಕಲ್ಪಿಸುತ್ತದೆ ಆದರೆ ಇತ್ತೀಚಿಗಿನ ದಿನಗಳಲ್ಲಿ ಅದರ ಅವನತಿಗೆ ಮನುಷ್ಯ ಮುಂದಾಗುತ್ತಿರುವುದು ಶೋಚನೀಯ ಈದಿಸೆಯಲ್ಲಿ ಮನುಕುಲಕ್ಕೆ ಸಂಕಷ್ಟ ತಪ್ಪಿದಲ್ಲ ಎಂದು ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕ ಅಜಿತ್ ದೇವಾಡಿಗ ಹೇಳಿದರು.

ಭಾನುವಾರ ಕೋಟದ ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದ ಇವರ ಸಂಯೋಜನೆಯೊಂದಿಗೆ ಕೋಟದ ರಾಷ್ಟ್ರೀಯ ಹೆದ್ದಾರಿ ಹಾಗೂ ದೇಗುಲದ ವಠಾರದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ಗೀತಾನಂದ ಫೌಂಡೇಶನ್ ಮಣೂರು, ಅನ್ನಪೂರ್ಣ ನರ್ಸರಿ ಪೇತ್ರಿ, ಸಮುದ್ಯತಾ ಗ್ರೂಪ್ಸ್ ಕೋಟ, ಸುವರ್ಣ ಎಂಟರ್ಪ್ರೈಸ್ ಬ್ರಹ್ಮಾವರ ಇವರ ಸಹಭಾಗಿತ್ವದಡಿ 264ನೇ ಭಾನುವಾರ ಪರಿಸರಸ್ನೇಹಿ ಅಭಿಯಾನದ ಪ್ರಯುಕ್ತ ಹಸಿರು ಜೀವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಮ್ಮಸುತ್ತಮುತ್ತಲಿನ ವನಗಳಿಲ್ಲದೆ ಕಾಂಕ್ರೀಟ್ ಕಾಡಿನಲ್ಲಿ ವಾಸ್ತವ್ಯ ಕಾಣುತ್ತಿದ್ದೇವೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಿಡನೆಟ್ಟು ಮುಂದಿನ ಪೀಳಿಗೆಗೆ ಯೋಗ್ಯ ವಾತಾವರಣ ಸಿಗುವಂತ್ತಾಗಲಿ ಎಂದು ಪಂಚವರ್ಣ ನಿರಂತರ ಪ್ರಕೃತಿ ಮಾತೆಯ ಆರಾಧನೆಯನ್ನು ಕೊಂಡಾಡಿದ್ದಾರು.

ಕೋಟ ಗ್ರಾಮಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ ಸ್ಥಳೀಯರಿಗೆ ಗಿಡ ಹಸ್ತಾಂತರಿಸಿದರು.

Click Here

ಕಾರ್ಯಕ್ರಮದ ಅಂಗವಾಗಿ ಕೋಟ ರಾಷ್ಟ್ರೀಯ ಹೆದ್ದಾರಿ ವಿವಿಧ ಭಾಗಗಳಲ್ಲಿ 35ಕ್ಕೂ ಅಧಿಕ ಗಿಡಗಳನ್ನು ನಡೆಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ಟ್ರಸ್ಟಿ ದಿನೇಶ್ ದೇವಾಡಿಗ, ಶ್ರೀಹಿರೇಮಹಾಲಿಂಗೇಶ್ವರ ಮಿತ್ರವೃಂದದ ಕಾರ್ಯಾಧ್ಯಕ್ಷ ಜಿ.ಎಸ್ ಆನಂದ್ ದೇವಾಡಿಗ, ಮಿತ್ರವೃಂದದ ರಾಜೇಶ್ ದೇವಾಡಿಗ, ಕೋಟ ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಪಂಚವರ್ಣದ ಮಹೇಶ್ ಬೆಳಗಾವಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯದರ್ಶಿ ನಿತೀನ್ ಕುಮಾರ್ ವಂದಿಸಿದರು.

Click Here

LEAVE A REPLY

Please enter your comment!
Please enter your name here