ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ವರದರಾಜ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿಕ್ಷಣಕ್ಕಾಗಿ ಮತ್ತು ಬಡ ರೋಗಿಗಳಿಗೆ ಸುಮಾರು 20ಲಕ್ಷಕ್ಕೂ ಹೆಚ್ಚಿನ ಧನಸಹಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಉದ್ಯಮಿ, ದಾನಿ ಕಟ್ಕೆರೆ ಜೆಪಿ ಶೆಟ್ಟಿಯವರನ್ನು ಇತ್ತೀಚೆಗೆ ಕೋಟೇಶ್ವರ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ ಗವರ್ನರ್ ಸುರೇಶ್ ಪ್ರಭು, ಅಧ್ಯಕ್ಷರಾದ ನಿತ್ಯಾನಂದ ಎಸ್. ಮತ್ತು ಲಯನ್ಸ್ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











