ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಶ್ರೀ ಅಘೋರೇಶ್ವರ ಮೆಲೋಡಿಸ್ ಗ್ರೂಪ್ ಕೋಟ ಇವರ 13ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮಾಚರಣೆಯನ್ನು ಸಾಲಿಗ್ರಾಮದ ಹೊಸಬದುಕು ಆಶ್ರಮ ಇಲ್ಲಿ ಜು. 20ರಂದು ಆಚರಿಸಿಕೊಂಡಿತು.
ಅಘೋರೇಶ್ವರ ಸಂಸ್ಥೆಯ ವತಿಯಿಂದ ಆಶ್ರಮದ ನಿವಾಸಿಗಳಿಗೆ ದಿನನಿತ್ಯದ ದಿನಸಿ ಸಾಮಗ್ರಿಗಳು ಹಾಗೂ ಬಟ್ಟೆಯನ್ನು ನೀಡಿತು. ಕಾರ್ಯಕ್ರಮದಲ್ಲಿ ನೆರವು ಹಸ್ತಾಂತರ ಮಾಡಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ಕೋಟ ಸಂಗೀತ ಸಂಸ್ಥೆ ಒಂದು ವರ್ಷದಲ್ಲಿ ಸಂಪಾದಿಸಿದ ಅದರ ಅರ್ಧ ಭಾಗ ಒಳ್ಳೆಯ ಕೆಲಸಕ್ಕೆ ವಿನಿಯೋಗಿಸುತ್ತಿರುವುದು ಅದರಲ್ಲೂ ಆಶ್ರಮಕ್ಕೆ ನೆರವು ಕಾರ್ಯ ಶ್ಲಾಘನೀಯ ಎಂದರು.
ಶ್ರೀ ಅಘೋರೇಶ್ವರ ಸಂಸ್ಥೆಯ ಸಂಸ್ಥಾಪಕರಾದ ರವಿ ಬನ್ನಾಡಿ ಮಾತನಾಡಿ ಅಣ್ಣನ ಕನಸು ಇದೀಗ ನನಸಾಗಿದೆ. ಆ ಕನಸು ನನಸು ಮಾಡಬೇಕೆನ್ನುವಂತಹ ಛಲವನ್ನ ಇಟ್ಟುಕೊಂಡು ಸಂಗೀತ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದೇನೆ. ಈ ಸಂಸ್ಥೆ ಹಲವಾರು ವರ್ಷದಿಂದ ಸಂಗೀತ ಆಸಕ್ತರನ್ನು ಹೊರ ತರುವಂತೆ ಮಾಡುತ್ತಿದೆ. ಈ ಸಂಸ್ಥೆಯಲ್ಲಿ ಕಲಿತಂತಹ ವಿದ್ಯಾರ್ಥಿಗಳಾಗಿ, ಮುಂದಿನ ದಿನದಲ್ಲಿ ಅದ್ಭುತ ಗಾಯಕರಾಗಿ ಹೊರಹೊಮ್ಮುತ್ತಾರೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಸಂಸ್ಥೆಯ ಗಾಯಕರಿಗೆ ಐಡೆಂಟಿ ಕಾರ್ಡ್‍ನ್ನು ನ್ಯಾಯವಾದಿ ಟಿ. ಮಂಜುನಾಥ್ ಗಿಳಿಯಾರು ವಿತರಿಸಿದರು.
ಮುಖ್ಯ ಅಭ್ಯಾಗತರಾಗಿ ಗುತ್ತಿಗೆದಾರ ಮಾಧವ್ ಪೂಜಾರಿ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ಅಧ್ಯಕ್ಷ ಯೋಗೀಶ್ ಕುಮಾರ್, ಕೋಟ ಸಿ.ಎ ಬ್ಯಾಂಕಿನ ನಿರ್ದೇಶಕರಾದ ರಂಜಿತ್ ಕುಮಾರ ಬಾರಿಕೆರೆ , ಹೊಸಬದುಕು ಆಶ್ರಮ ಸಾಲಿಗ್ರಾಮದ ಮುಖ್ಯಸ್ಥ ವಿನಯಚಂದ್ರ ಸಾಸ್ತಾನ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ಗಾಯಕ ಗಾಯಕಿಯರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಹೊಸ ಬದುಕು ಆಶ್ರಮದಲ್ಲಿ ನಡೆಯಿತು.
ಸಂಸ್ಥೆಯ ಸುಜಾತ ಎನ್ ಕುಂದರ್ ಸ್ವಾಗತಿಸಿದರು. ಶಿಕ್ಷಕರಾದ ನಾಗೇಂದ್ರ ಆಚಾರ್ಯ ಚಿತ್ರಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಜನಾ ಸೌಂಡ್ಸ್ ಅಂಡ್ ಲೈಟ್ಸ್ ಕೋಟ ಪಡುಕೆರೆ ಕಾರ್ಯಕ್ರಮಕ್ಕೆ ಸಹಕಾರ ನೀಡಿತು.











