ಕಾಳಾವರ ಸರಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕ ಕೆ. ದಿನೇಶ ಪ್ರಭುರವರಿಗೆ ವಯೋನಿವೃತ್ತಿ ಬೀಳ್ಕೊಡುಗೆ

0
814

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕಾಳಾವರದ ನೇತಾಜಿ ಸರಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕರಾದ ಕೆ. ದಿನೇಶ್ ಪ್ರಭುರವರು 31 ವರ್ಷಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ವಯೋನಿವೃತ್ತಿಯ ಪ್ರಯುಕ್ತ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಳಾವರ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಮಂಜುನಾಥ ಶೆಟ್ಟಿಗಾರರವರು ವಹಿಸಿದ್ದರು.

Click Here

ಕುಂದಾಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಗಮಿಸಿ ನಿವೃತ್ತರಾಗಲಿರುವ ದಿನೇಶ್ ಪ್ರಭುರವರಿಗೆ ಸನ್ಮಾನಿಸಿ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಎಸ್. ಡಿ.ಎಂ. ಸಿ. ಅಧ್ಯಕ್ಷರಾದ ಸತೀಶ್ ಜೋಗಿ, ಕಾಳಾವರ ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಶೆಟ್ಟಿ , ರೋಟರಿ ಸದಸ್ಯರಾದ ಚಂದ್ರಶೇಖರ ಹೆಗ್ಡೆ ಶಾನಾಡಿ, ಉದ್ಯಮಿಗಳಾದ ಭರತ್ ಕುಮಾರ್ ಶೆಟ್ಟ, ಎಸ್ ಡಿ ಎಂ ಸಿ ಸದಸ್ಯರು ಉಪಸ್ಥಿತರಿದ್ದರು.

ಶಾಲಾ ಶಿಕ್ಷಕ ವೃಂದದವರು , ವಿದ್ಯಾರ್ಥಿಗಳು ದಿನೇಶ ಪ್ರಭು ರವರ ಒಡನಾಟವನ್ನು ಸ್ಮರಿಸಿ ಭಾವುಕರಾದರು. ತದನಂತರ ಅತಿಥಿಗಳ ಸಮ್ಮುಖದಲ್ಲಿ ಶಾಲಾ ವತಿಯಿಂದ ಕೆ. ದಿನೇಶ ಪ್ರಭು ದಂಪತಿಗಳಿಗೆ ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಶಿಕ್ಷಕರಾದ ಮಹಾಬಲೇಶ್ವರ ಭಾಗವತ್ ವಾಚಿಸಿದರು.

ಮುಖ್ಯೋಪಾಧ್ಯಾಯರಾದ ಮುಸರತ್ ಜಹಾಂನ್ ಅಕ್ಬರ್ ಎಂ. ಸ್ವಾಗತಿಸಿ, ಶಿಕ್ಷಕರಾದ ಗಣೇಶ ಶೆಟ್ಟಿಗಾರ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ಕನ್ನಡ ಶಿಕ್ಷಕ ರವಿರಾಜ ಶೆಟ್ಟಿ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here