ಕುಂದಾಪುರ ಮಿರರ್ ಸುದ್ದಿ…
ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆ (ದೂಳಂಗಡಿ)ಇಲ್ಲಿಯ ಹಳೆ ವಿದ್ಯಾರ್ಥಿ ಸಂಘದ ಪುನರ್ ರಚನೆ ಕುರಿತು ಸಭೆ ಇತ್ತೀಚಿಗೆ ಶಾಲಾ ಸಭಾಂಗಣದಲ್ಲಿ ಜರುಗಿತು.
ನೂತನ ಅಧ್ಯಕ್ಷರಾಗಿ ಪ್ರಣಿತ ಶೆಟ್ಟಿ, ಉಪಾಧ್ಯಕ್ಷರಾಗಿ ಆನಂದ ಗಾಣಿಗ, ಕೋಶಾಧಿಕಾರಿಯಾಗಿ ವಿಶ್ವನಾಥ್ ಅಲ್ಸೆ ಹಾಗೂ ಕಾರ್ಯದರ್ಶಿಯಾಗಿ ಶಾಲಾ ಮುಖ್ಯೋಪಾಧ್ಯಯಿನಿ ಪ್ರೆಸಿಲ್ಲ ಅವರು ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ಸುಧರ್ಮಾ ರಾವ್, ಶೇಖರ್ ಮೆಂಡನ್, ಶಮ್ಮಿ ಜೀವನ್ ಶೆಟ್ಟಿ, ಗೀತಾ ಶೆಟ್ಟಿ, ಶೇಖರ್ ಪೂಜಾರಿ, ಹರ್ಷವರ್ಧನ ರಾವ್, ಜ್ಞಾನೇಶ್ವರಿ ಕಲ್ಕೂರ, ಸುರೇಂದ್ರ ಆಚಾರ್, ಶ್ರೀನಿವಾಸ ಉಡುಪ, ಗಂಗಾಧರ ಆಚಾರ್, ಮಂಜುನಾಥ ಶೆಟ್ಟಿ, ಕೃಷ್ಣ ಹೆಗ್ಗೊಡ್ಬೆಟ್ಟು, ಗೌರವ ಸದಸ್ಯರಾಗಿ ರಾಘವೇಂದ್ರ ಆಚಾರ್, ರಾಮ ಕುಮಾರ್, ನಾಗೇಶ್ ಆಚಾರ್, ಡೆನ್ನಿಸ್ ಡಿಸೋಜ, ಪ್ರಕಾಶ ಆಚಾರ್ ಆಯ್ಕೆಗೊಂಡರು.











