ಬೈಂದೂರು :ಅಕ್ರಮ ಜಾನುವಾರು ಸಾಗಾಟ; ಇಬ್ಬರ ಬಂಧನ

0
836

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬೈಂದೂರು ಪೊಲೀಸರು ಬಂಧಿಸಿರುವ ಘಟನೆ ಜುಲೈ 31 ರಂದು ನಡೆದಿದೆ.

ಬಂಧಿತ ಆರೋಪಿಗಳನ್ನು ಬೈಂದೂರಿನ ಗುಂಜನಗುಡ್ಡೆ ನಿವಾಸಿ ಅಬ್ದುಲ್ ಖಯೂಮ್ (26) ಮತ್ತು ಬೈಂದೂರಿನ ಕಲಿನ ಮನೆ ನಿವಾಸಿ ನಿವಾಸಿ ರಮೇಶ್ ಮೊಗವೀರ (40) ಎಂದು ಗುರುತಿಸಲಾಗಿದೆ.

Click Here

ಜುಲೈ 31ರ ಮುಂಜಾನೆ 4 ಗಂಟೆ ಸುಮಾರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಬೈಂದೂರು ಪೊಲೀಸ್ ಠಾಣೆಯ ಪಿಎಸ್‌ಐ ತಿಮ್ಮೇಶ್ ಬಿ.ಎನ್ ನೇತೃತ್ವದ ತಂಡ ಹೇರೂರಿನ ಚಟ್ಗುಳಿ ಕಡೆಯಿಂದ ಬರುವ ರಸ್ತೆಯ ಗುಂಜನಗುಡ್ಡೆ ಬಳಿ ದಾಳಿ ನಡೆಸಿದ್ದಾರೆ. ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನವನ್ನು ತಂಡ ತಡೆದಿದೆ.

ಪರಿಶೀಲನೆ ನಡೆಸಿದಾಗ, ಪೊಲೀಸರು ವಾಹನದಲ್ಲಿ ಕಂದು ಜೆರ್ಸಿ ತಳಿಯ ಹಸುವನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಕಂಡುಬಂದಿದೆ. ತಕ್ಷಣವೇ ಪೊಲೀಸರು ಹಸುವನ್ನು ರಕ್ಷಿಸಿದ್ದಾರೆ. ಅಪರಾಧಕ್ಕೆ ಬಳಸಿದ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Click Here

LEAVE A REPLY

Please enter your comment!
Please enter your name here