ಕುಂದಾಪುರ ಮಿರರ್ ಸುದ್ದಿ…
ಕಿರಿಮಂಜೇಶ್ವರ : ಜುಲೈ 28ರಂದು ರತ್ತುಬಾಯಿ ಅನುದಾನಿತ ಪ್ರೌಢಶಾಲೆ ಬೈಂದೂರಿನಲ್ಲಿ ನಡೆದ ವಲಯ ಮಟ್ಟದ 14ರ ವಯೋಮಾನದ ಯೋಗಾಸನ ಸ್ಪರ್ಧೆಯ ರಿಥಮಿಕ್ ವಿಭಾಗದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಸಾನಿಧ್ಯ ಎಸ್ ಮೊಗವೀರ (7ನೇ ತರಗತಿ) ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.
ಸಾಮೂಹಿಕ ಯೋಗ ಸ್ಪರ್ಧೆಯಲ್ಲಿ ಅನುಷ್ಕಾ ಎಚ್ ಪೂಜಾರಿ (7ನೇ ತರಗತಿ) ಪ್ರಥಮ ಸ್ಥಾನ, ಅನಿಷ್ಕಾ (8ನೇ ತರಗತಿ) ದ್ವಿತೀಯ ಸ್ಥಾನ, ಅಮೂಲ್ಯ (7ನೇ ತರಗತಿ) ಚತುರ್ಥ ಸ್ಥಾನ, ವಂಶಿತ್ (7ನೇ ತರಗತಿ) ಪಂಚಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೆಯೇ ವಲಯ ಮಟ್ಟದ ಚಾಂಪಿಯನ್ಸ್ ಆಗಿ ಕೀರ್ತಿಯನ್ನು ತಂದಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ, ಬೋಧಕ/ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.











