ಕುಂದಾಪುರ :ಕ್ರೀಡಾಕೂಟದಲ್ಲಿ ಶಾಲಾ ಮಕ್ಕಳಿಗೆ ವಯೋಮಿತಿಯ ಮಾನದಂಡ – ಉಡುಪಿ ಜಿಲ್ಲಾ ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆಯಿಂದ ಮನವಿ

0
257

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ :ಜಿಲ್ಲೆಯ ಎಲ್ಲಾ ವಲಯದ ಸರಕಾರಿ ಶಾಲೆಗಳಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಶಾಲಾ ಮಕ್ಕಳಿಗೆ ವಯೋಮಿತಿಯ ಮಾನದಂಡ ನೀಡಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಅವೈಜ್ಞಾನಿಕವಾಗಿ ಕ್ರೀಡಾಕೂಟ ನಡೆಸುತ್ತಿದ್ದು, ಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಕುಂದಾಪುರದ ತಹಶೀಲ್ದಾರರಾದ ಪ್ರದೀಪ್ ಕೆ. ಕುರುಡೇಕರ್ ರವರ ಮೂಲಕ ಉಡುಪಿ ಜಿಲ್ಲಾ ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಸಲಾಂ ಚಿತ್ತೂರು ಅವರೊಂದಿಗೆ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರಾದ ಎಸ್.ವಿ.ನಾಗರಾಜ್, ಕುಂದಾಪುರ ಪುರಸಭೆ ಘಟಕದ ಅಧ್ಯಕ್ಷರಾದ ಅಶ್ವತ್ ಕುಮಾರ್, ಕಾಪು ತಾಲೂಕು ಉಸ್ತುವಾರಿಗಳಾದ ಅಶ್ಪಕ್ ರವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here