ಗಂಗೊಳ್ಳಿ :ಜಾನುವಾರು ಕಳ್ಳತನ ಆರೋಪಿಯ ಬಂಧನ, ಕಾರು ವಶಕ್ಕೆ

0
501

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಗಂಗೊಳ್ಳಿ ಗ್ರಾಮದಲ್ಲಿ ಜು.31ರಂದು ಬೆಳಿಗಿನ ಜಾವ ಮೇಲ್ ಗಂಗೊಳ್ಳಿ ಸಮೀಪ ಬಾಂಬೆ ಬಜಾರ್ ಎದುರು ರಸ್ತೆಯ ಬದಿಯಲ್ಲಿ ಮಲಗಿರುವ ದನವನ್ನು ಹಿಂಸಾತ್ಮಕವಾಗಿ ಹಿಡಿದುಕೊಂಡು ಬಿಳಿ ಬಣ್ಣದ ಕಾರಿನ ಹಿಂಬದಿ ಡಿಕ್ಕಿಗೆ ತುಂಬಿಸಿಕೊಂಡು ಹೋಗಿದ್ದ ಬಗ್ಗೆ ಪ್ರಕರಣ ದಾಖಲಾಗಿದ್ದು ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಿಂದ ವಿಶೇಷ ತಂಡ ರಚಿಸಿ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳಾದ ಮೊಹಮ್ಮದ್ ಅನ್ಸಾರ್@ಅನ್ಸಾರ್ ತೋಡಾರ್ (32ವ), ಮೂಡುಬಿದರೆ ತಾಲೂಕು ಈತನನ್ನು ಆಗಸ್ಟ್ 7 ರಂದು ಬೆಳಿಗ್ಗೆ 6ಗಂಟೆಗೆ ಮಂಗಳೂರಿನ ಕೂಳೂರಿನಲ್ಲಿ ಕೃತ್ಯಕ್ಕೆ ಬಳಸಿದ ಕಾರು ಸಮೇತ ಆಪಾದಿತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಆರೋಪಿತನ ಮೇಲೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಒಟ್ಟೂ ೧೩ ಪ್ರಕರಣಗಳು ದಾಖಲಾಗಿದೆ. ಹಾಗೂ ಇನ್ನೂ ಉಳಿದ ೩ ಆರೋಪಿತರನ್ನು ಪತ್ತೆಗೆ ಬಲೆ ಬೀಸಲಾಗಿದೆ,

ಈ ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಿದ ಕ್ರೆಟಾ ಕಾರ್ ( ಅಂದಾಜು ಮೌಲ್ಯ 6 ಲಕ್ಷ ರೂಪಾಯಿ) ಹಾಗೂ 1 ಮೊಬೈಲ್ ಪೋನ್ ಗಳನ್ನು (ಅಂದಾಜು ಮೌಲ್ಯ 5 ಸಾವಿರ) ಸ್ವಾಧೀನಪಡಿಸಿಕೊಳ್ಳಲಾಗಿದೆ.

Click Here

ಈ ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಿದ ಕ್ರೆಟಾ ಕಾರ್ ( ಅಂದಾಜು ಮೌಲ್ಯ 6 ಲಕ್ಷ ರೂಪಾಯಿ) ಹಾಗೂ 1 ಮೊಬೈಲ್ ಪೋನ್ ಗಳನ್ನು (ಅಂದಾಜು ಮೌಲ್ಯ 5 ಸಾವಿರ) ಸ್ವಾಧೀನಪಡಿಸಿಕೊಳ್ಳಲಾಗಿದೆ.

ಉಡುಪಿ ಜಿಲ್ಲೆ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ ನಾಯ್ಕ ಅವರ ಮಾರ್ಗದರ್ಶನದಂತೆ ಹೆಚ್ ಡಿ ಕುಲಕರ್ಣಿ, ಮಾನ್ಯ ಪೋಲೀಸ್ ಉಪಾಧೀಕ್ಷಕರು ಕುಂದಾಪುರ ಹಾಗೂ ಜಯರಾಮ ಗೌಡ ಪ್ರಭಾರ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ರವರ ನಿರ್ದೇಶನದಂತೆ ಗಂಗೊಳ್ಳಿ, ಪೊಲೀಸ್ ಠಾಣಾ ಪಿ ಎಸ್ ಐ ರವರಾದ ಪವನ್ ನಾಯಕ್, ಬಸವರಾಜ ಕನಶೆಟ್ಟಿ (ತನಿಖೆ), ಹಾಗೂ ಸಿಬ್ಬಂದಿಗಳಾದ ಕೃಷ್ಣ ದೇವಾಡಿಗ, ಚೇತನ್‌, ಶಾಂತರಾಮ ಶೆಟ್ಟಿ, ಸುರೇಶ್‌, ಸಚಿನ್ ಶೆಟ್ಟಿ, ರಾಜು ಹಾಗೂ ಸಂದೀಪ ಕುರಣಿ, ಪ್ರಸನ್ನ, ರಾಘವೇಂದ್ರ ಪೂಜಾರಿ, ಮಾಳಪ್ಪ ದೇಸಾಯಿ, ಚಿದಾನಂದ ರವರು ಭಾಗಹಿಸಿದ್ದರು.

ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ತಂಡಕ್ಕೆ ಪೊಲೀಸ್ ಅಧೀಕ್ಷಕರಾದ ಹರಿರಾಂ ಶಂಕರ್ ಅಭಿನಂದಿಸಿದರು.

Click Here

LEAVE A REPLY

Please enter your comment!
Please enter your name here