ಸಾಸ್ತಾನ :ಗೋಳಿಗರಡಿ ದೈವಸ್ಥಾನದಲ್ಲಿ ಬಿಲ್ಲವ ಸಂಘಟನೆಯಿಂದ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ

0
475

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಬ್ರಹ್ಮ ಬೈದರ್ಕಳ ಗೋಳಿ ಗರಡಿ ಸಾಸ್ತಾನ ಹಾಗೂ ಬ್ರಹ್ಮ ಬೈದರ್ಕಳ ಬಿಲ್ಲವ ಸಂಘ, ಬಿಲ್ಲವ ಮಹಿಳಾ ಸಂಘ ಸಾಸ್ತಾನ ಇವರ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು.

Click Here

ಬೆಳಿಗ್ಗೆ ಬ್ರಹ್ಮಬೈದರ್ಕಳ ಬಿಲ್ಲವ ಮಹಿಳಾ ಭಜನಾ ತಂಡ ಗೋಳಿಗರಡಿ ಇವರಿಂದ ಭಜನೆ, ವೇ.ಮೂ ಸುಬ್ರಹ್ಮಣ್ಯ ಹೊಳ್ಳ ಇವರ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಸ್ರ ಕುಂಕುಮಾರ್ಚನೆ ಇನ್ನಿತರ ಪೂಜಾ ಕಾರ್ಯಗಳು ನಡೆದವು.

ವರಮಹಾಲಕ್ಷ್ಮೀ ಪೂಜಾ ವಿಧಿವಿಧಾನದಲ್ಲಿ ಬ್ರಹ್ಮಬೈದರ್ಕಳ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಲೀಲಾವತಿ ಗಂಗಾಧರ್ ಭಾಗಿಯಾದರು.

ಸಾಸ್ತಾನ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಎಂ.ಸಿ ಚಂದ್ರಶೇಖರ, ಪ್ರಧಾನಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ, ಗ್ರಾಮಸಮಿತಿಯ ಪ್ರಮುಖರಾದ ಸಂಬ್ಲೋಡು ಸುರೇಶ್ ಪೂಜಾರಿ,ಸುರೇಶ್ ಪೂಜಾರಿ ಪಾಂಡೇಶ್ವರ, ಮೂಡಹಡು ರಾಜು ಪೂಜಾರಿ,ಬಿಲ್ಲವ ಸಮುದಾಯದ ಹಿರಿಯರಾದ ರತ್ನ ಜೆ ರಾಜ್,ಕುಸುಮಾ ಮನೋಜ್,ಮನೋಜ್ ಪೂಜಾರಿ,ಗೋಳಿಗರಡಿ ದೈವಸ್ಥಾನದ ಅಧ್ಯಕ್ಷ ಜಿ.ವಿಠ್ಠಲ್ ಪೂಜಾರಿ,ಪಾತ್ರಿ ಶಂಕರ್ ಪೂಜಾರಿ,ಅರ್ಚಕರಾದ ದಿನಕರ್ ಪೂಜಾರಿ,ಮಹಿಳಾ ಸಂಘದ ಕಲ್ಪನಾ ದಿನಕರ್ ಮತ್ತಿತರರು ಇದ್ದರು. ಅಪರಾಹ್ನ ಮಹಾಅನ್ನಸಂತರ್ಪಣೆ ಇನ್ನಿತ ಪೂಜಾ ಕಾರ್ಯಕ್ರಮಗಳು ಜರಗಿತು.

Click Here

LEAVE A REPLY

Please enter your comment!
Please enter your name here