ಕುಂದಾಪುರ ಮಿರರ್ ಸುದ್ದಿ…

ಕೋಟ: ಬಾಳ್ಕುದ್ರು ಹಂಗಾರಕಟ್ಟೆ ಬ್ರಹ್ಮ ಶ್ರೀನಾರಾಯಣ ಗುರು ಬಿಲ್ಲವ ಸಂಘದ ಆಶ್ರಯದಲ್ಲಿ ಬಿಲ್ಲವ ಮಹಿಳಾ ಘಟಕದ ನೇತೃತ್ವದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆಯನ್ನು ಹಮ್ಮಿಕೊಂಡಿತು.
ಈ ಪ್ರಯುಕ್ತ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ತದನಂತರ ವೇ.ಮೂ ವೆಂಕಟರಮಣ(ಸೂರಿ) ಭಟ್ ಬಿರ್ತಿ ಇವರ ನೇತೃತ್ವದಲ್ಲಿ ವರಮಹಾಲಕ್ಷ್ಮಿ ಪೂಜೆ, ಸಹಸ್ರ ಕುಂಕುಮಾರ್ಚನೆ ಇತರ ವಿಧಿವಿಧಾನಗಳು ನೆರವೆರಿತು.
ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಗೌರವಾಧ್ಯಕ್ಷರಾದ ನಾರಾಯಣ ಪೂಜಾರಿ, ಗುರಿಕಾರರಾದ ಕುಷ್ಟ ಪೂಜಾರಿ, ಬಿಲ್ಲವ ಸಂಘದ ಅಧ್ಯಕ್ಷ ವಿಜಯ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷ ಶಕುಂತಲಾ ವಾಸುದೇವ ಕೋಟ್ಯಾನ್, ಅರ್ಚಕರಾದ ಶಂಕರ್ ಪೂಜಾರಿ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.











