ಹಂಗಳೂರು ಲಯನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ದೇಶ ಭಕ್ತಿ ಗೀತೆಗಳ ಸ್ಪರ್ಧೆ

0
559

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :79ನೇ ಸ್ವಾತಂತ್ರ್ಯ ಉತ್ಸವದ ಸಂದರ್ಭದಲ್ಲಿ, ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಸಂದೀಪ ಶೆಟ್ಟಿಯವರ ನೇತೃತ್ವದಲ್ಲಿ ದ್ವಿತೀಯ ವರ್ಷದ ದೇಶ ಭಕ್ತಿ ಗೀತೆಗಳ ಸ್ಪರ್ಧೆ ಕುಂದಾಪುರ ವಲಯದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಹೋಟೆಲ್ ಶಾರೋನ್ ಸಭಾ ಭವನದಲ್ಲಿ ಜರುಗಿತು.

ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಮಾತನಾಡಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಲಯನ್ಸ್ ಕ್ಲಬ್ ಹಂಗಳೂರನ್ನು ಮನಸಾರೆ ಮೆಚ್ಚಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಈ ಸ್ಪರ್ಧೆಯ ಪ್ರಾಯೋಜಕರಾದ ಅಲೈನಾ ಬ್ಯೂಟಿ ಪಾರ್ಲರ್ ಕುಂದಾಪುರ ಇದರ ಮಾಲಕರಾದ ಅನುಷಾ ಡಿ’ಕೋಸ್ತ್, ರಜತ್ ಹೆಗ್ಡೆ, ನಿತೀಶ್ ಡಿ’ಕೋಸ್ತ್ ಉಪಸ್ಥಿತರಿದ್ದರು.

Click Here

ಸ್ಪರ್ಧೆಯಲ್ಲಿ ಸುಮಾರು 70 ಮಕ್ಕಳು ಭಾಗವಹಿಸಿದ್ದು ಹೈಸ್ಕೂಲ್ ವಿಭಾಗದಲ್ಲಿ ಪೂರ್ವಿ ಮೊಗವೀರ, ಮೊಹಮ್ಮದ್ ಇಫ್ರಾಜ್, ಮತ್ತು ದಾಕ್ಷಾಯಿಣಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಗಳಿಸಿದರು.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಗೀತಾ ನಾಯಕ್, ಸಂಹಿತಾ ತಂತ್ರಿ ಮತ್ತು ಶ್ರೀದಾ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.

ಸಮಾರೋಪ ಸಮಾರಂಭದಲ್ಲಿ, ಲಯನ್ಸ್ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಪ್ರಾಂತೀಯ ಅಧ್ಯಕ್ಷ ಮತ್ತು ಲಯನ್ಸ್ ಸದಸ್ಯರ ಸಮಕ್ಷಮದಲ್ಲಿ ನಗದು ಬಹುಮಾನ, ಪಾರಿತೋಷಕ, ಪ್ರಮಾಣ ಪತ್ರ ಇತ್ಯಾದಿಗಳನ್ನು ಸ್ವೀಕರಿಸಿದರು. ಲಯನ್ ರೋವನ್ ಡಿಕೋಸ್ತಾ ಸ್ವಾಗತಿಸಿದರು. ಕಾರ್ಯಕ್ರಮವನ್ನು ಲಯನ್ ಹೆಚ್. ಬಾಲಕೃಷ್ಣ ಶೆಟ್ಟಿ ನಿರೂಪಿಸಿ, ವಂದಿಸಿಸಿದರು.

Click Here

LEAVE A REPLY

Please enter your comment!
Please enter your name here