ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕಾಳಾವರದ ನೇತಾಜಿ ಸುಭಾಷ್ ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯಲ್ಲಿ 2025 – 26ನೇ ಸಾಲಿನ ರೋಟರಿ ಇಂಟರ್ಯಾಕ್ಟ್ ಕ್ಲಬ್ ನ ಪದ ಪ್ರದಾನ ಕಾರ್ಯಕ್ರಮವು ರೋಟರಿ ಮಿಡ್ ಟೌನ್ ಕುಂದಾಪುರದ ಅಧ್ಯಕ್ಷರಾದ ರೊಟೇರಿಯನ್ ಸುನಿಲ್ ಕುಮಾರ್ ಶೆಟ್ಟಿ ಹೇರಿಕುದ್ರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಇಂಟರ್ಯಾಕ್ಟ್ ಅಧ್ಯಕ್ಷರಾಗಿ 9ನೇ ತರಗತಿಯ ಪೃಥ್ವಿ ಕಾರ್ಯದರ್ಶಿಯಾಗಿ ಎಂಟನೇ ತರಗತಿಯ ರಂಜಿತಾ ಆಯ್ಕೆಯಾದರು.
ಇದೇ ಸಂದರ್ಭದಲ್ಲಿ ನಿವೃತ್ತ ಹಿಂದಿ ಶಿಕ್ಷಕ ದಿನೇಶ್ ಪ್ರಭು ಅವರನ್ನು ರೋಟರಿ ವತಿಯಿಂದ ಸನ್ಮಾನಿಸಲಾಯಿತು.
ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದು ರಾಜ್ಯಕ್ಕೆ ನಾಲ್ಕನೆ ಸ್ಥಾನಿಯಾದ ನೂರ್ ಮಾಝಿನ್ ಮತ್ತು ಕನ್ನಡ ಮಾಧ್ಯಮದಲ್ಲಿ ಗರಿಷ್ಠ ಅಂಕ ಪಡೆದ ಸರ್ವಶ್ರೀ ಇವರಿಗೆ ರೋಟರಿ ವತಿಯಿಂದ ಪುರಸ್ಕರಿಸಲಾಯಿತು.
ಶಾಲಾ ಆವರಣದಲ್ಲಿ ಗಿಡ ನೆಡುವುದರ ಮೂಲಕ ಪರಿಸರ ಜಾಗೃತಿಯ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲಾಯಿತು.
ರೋಟರಿ ಮಿಡ್ ಟೌನ್ ಕಾರ್ಯದರ್ಶಿ ಸುಕುಮಾರ ಶೆಟ್ಟಿ, ಮಾಜಿ ಜೋನಲ್ ನೆಪ್ಟಿನೆಂಟ್ ಗವರ್ನರ್ ರಂಜಿತ್ ಕುಮಾರ್ ಶೆಟ್ಟಿ, ಸಭಾಪತಿ ಚಂದ್ರಶೇಖರ ಹೆಗ್ಡೆ , ಮಾಜಿ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಮುಸರತ್ ಜಹಾನ್ ಅಕ್ಬರ್ ಎಂ. ಉಪಸ್ಥಿತರಿದ್ದರು.
ನಿಕಟ ಪೂರ್ವ ಅಧ್ಯಕ್ಷ ಮನೋಜ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಕುಮಾರಿ ರಂಜಿತಾ ವಂದಿಸಿದರು. ವ್ಯಾಸರಾಜ ಕಾರ್ಯಕ್ರಮ ನಿರೂಪಿಸಿದರು.











