ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬ ಅಚರಣೆ

0
252

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆ.15ರಂದು 79ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ರಾಧೆ – ಮುದ್ದು ಕೃಷ್ಣ*ಸ್ಪರ್ಧೆಗಳನ್ನು ಮತ್ತು ಕೃಷ್ಣನ ಲೀಲೆಗಳನ್ನು ಪ್ರಸ್ತುತಪಡಿಸುವ ಸಮೂಹ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜಯ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಅಂಪಾರು ಇದರ ಅಧ್ಯಕ್ಷರಾದ ಬಲಾಡಿ ಸಂತೋಷ ಕುಮಾರ ಶೆಟ್ಟಿ ವಹಿಸಿ ಮಾತನಾಡಿ ನಮ್ಮ ಶಾಲೆಯು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ, ಮೌಲ್ಯಗಳನ್ನು ಪರಿಚಯಿಸುತ್ತಿದೆ. ಇಂತಹ ಕಾರ್ಯಕ್ರಮಗಳು ಪೋಷಕರ‌ ಉಪಸ್ಥಿತಿ, ತೊಡಗಿಸಿಕೊಳ್ಳುವಿಕೆ ಸಂಸ್ಥೆಯ ಯಶಸ್ಸಿಗೆ ಕೈಗನ್ನಡಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಶಾನ್ಕಟ್ಟು ರಾಜೀವ ಶೆಟ್ಟಿ ನೆರವೇರಿಸಿ, ಶುಭ ಹಾರೈಸಿದರು.

Click Here

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರು, ತೀರ್ಪುಗಾರರಾಗಿ ರೋಟರಿ ಕ್ಲಬ್ ಅಂಪಾರು ಇದರ ಅಧ್ಯಕ್ಷ ಗುರುರಾಜ್ ಶೆಟ್ಟಿ ಮತ್ತು ರೋಟರಿ ಕ್ಲಬ್ ಅಂಪಾರಿನ ನಿಕಟ ಪೂರ್ವ ಅಧ್ಯಕ್ಷರಾದ ದಿನೇಶ್ ಪೂಜಾರಿ ಗೊರಟೆ ಇವರು ಉಪಸ್ಥಿತರಿದ್ದು ಸಹಕರಿಸಿದರು .

ಸಂಜಯ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ನವೀನ್ ಕುಮಾರ್ ಶೆಟ್ಟಿಯವರು ಮಾತನಾಡಿ ಇಂತಹ ವೇದಿಕೆಗಳು ಅವಕಾಶ ಕಲ್ಪಿಸಿಕೊಡುವ ಮೂಲಕ ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ ಎಂದು ತಿಳಿಸಿದರು.

ಖಜಾಂಚಿ ಸುಭಾಷ್ ಚಂದ್ರ ಶೆಟ್ಟಿ ಕೊಡ್ಲಾಡಿ ಇವರು ಶ್ರೀ ಕೃಷ್ಣ ಜನ್ಮಾಷ್ಟಮಿಯು ಪೋಷಕರು ಸಂಭ್ರಮಿಸುವ ಅತೀ ದೊಡ್ಡ ಹಬ್ಬ, ತಮ್ಮ ಮಕ್ಕಳಲ್ಲಿ ಕೃಷ್ಣ, ರಾಧೆಯರನ್ನು ಕಾಣುತ್ತಾ, ಆರಾಧಿಸುವ ದಿನ ಎಂದರು.

ನಿರ್ದೇಶಕರಾದ ಉಮೇಶ್ ಕೊಠಾರಿ ಇವರು ಸ್ವಾತಂತ್ರ್ಯ ದಿನಾಚರಣೆ ಮಹತ್ವ, ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ಕುರಿತು ಮಾತನಾಡಿದರು ಮತ್ತು ಅರುಣ್ ಕುಮಾರ್ ಶೆಟ್ಟಿ ಅಂಪಾರು ಇವರು ಮಕ್ಕಳಿಗೆ ಬಹುಮಾನ ವಿತರಣೆ ಮಾಡಿ ಶುಭ ಹಾರೈಸಿದರು .

ಹಬ್ಬಗಳ ವಿಶೇಷ ಆಚರಣೆ ಮಕ್ಕಳಲ್ಲಿ ಸಾಂಸ್ಕೃತಿಕ ಧಾರ್ಮಿಕ ಮತ್ತು ಶೈಕ್ಷಣಿಕ ಅನುಭವಗಳನ್ನು ನೀಡುವಲ್ಲಿ ಸಹಕಾರಿಯಾಗುತ್ತದೆ. ಇದರಿಂದ ಮಕ್ಕಳ ಸೃಜನಶೀಲತೆ ಒಟ್ಟು ಗೂಡುವಿಕೆಗೆ ಉತ್ತೇಜನ ದೊರೆಯುತ್ತದೆ ಎಂದು ಶಾಲಾ ಆಡಳಿತ ಅಧಿಕಾರಿ ಚೈತ್ರ ಯಡಿಯಾಳ ಇವರು ತಿಳಿಸಿದರು.

ಶಾಲಾ ಮುಖ್ಯ ಶಿಕ್ಷಕಿ ವಿಲಾಸಿನಿ ಶೆಟ್ಟಿ ಸ್ವಾಗತಿಸಿ, ಸಂಯೋಜಕಿ ಸರೋಜಾ ಇವರು ವಂದನೆಯನ್ನು ಸಲ್ಲಿಸಿದರು ಶಿಕ್ಷಕರಾದ ಚೈತ್ರ ಶೆಟ್ಟಿ ಹಾಗೂ ಭವ್ಯ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here