ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವದ ಆಚರಣೆಯನ್ನು ಧ್ವಜಾರೋಹಣ ಮತ್ತು ಇಂಟೆಕ್ ಸದಸ್ಯರಿಂದ ವಾಹನಗಳ ಪುರ ಮೆರವಣಿಗೆ ಪುರಸಭೆಯ ಮುಖ್ಯ ರಸ್ತೆಯಲ್ಲಿ ನಡೆಸಿ ಆಚರಿಸಲಾಯಿತು.
ಧ್ವಜಾರೋಹಣವನ್ನು , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಅವರು ನೆರವೇರಿಸಿ , ಸಂವಿಧಾನದ ಆಶಯಗಳನು, ದೇಶದ ಪ್ರತಿಯೊಬ್ಬ ಪ್ರಜೆಗಳಿಗೆ ದೊರೆತರೆ , ಮಹಾತ್ಮ ಗಾಂಧಿಯವರ ಭವ್ಯ ಭಾರತದ ಕನಸು ನನಸಾಗುತ್ತದೆ ಎಂದರು. ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿದ ಮತದಾನದ ಹಕ್ಕು ರಾಜಕೀಯ ಲಾಭಕ್ಕಾಗಿ ಮೊಟಕುಗೊಳಿಸುವುದು , ದೇಶದ ಪ್ರಜೆಗಳ ಸ್ವಾತಂತ್ರ್ಯವನ್ನು ಅಣಕಿಸುವ ಹುನ್ನಾರವೆಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ , ನಗರ ಪ್ರಾಧಿಕಾರದ ಸದಸ್ಯರಾದ ಚಂದ್ರ ಅಮೀನ್ , ಇಂಟೆಕ್ ಕಾಂಗ್ರೆಸ್ ಪಕ್ಷದ ಶ್ರಮಿಕ ವರ್ಗದ ಸಂಘಟನೆ , ಹಿರಿಯರ ಶ್ರಮದಿಂದ ದೇಶಕ್ಕೆ ದೊರೆತ ಸ್ವಾತಂತ್ರ್ಯವನ್ನು ಕೇವಲ ಉಳ್ಳವರಿಗೆ ಮಾತ್ರವಲ್ಲದೆ ದುರ್ಬಲ ಜನರಿಗೂ ದೊರಕಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಅಸೋಸಿಯೇಷನ್ ಅಧ್ಯಕ್ಷರಾದ ಲಕ್ಷ್ಮಣ್ ಶೆಟ್ಟಿ ಅವರು ಸ್ವಾತಂತ್ರ್ಯೋತ್ಸವದ ಶುಭ ಸಂದೇಶವನ್ನು ನೀಡಿದರು.
ಸಭೆಯಲ್ಲಿ ಡ್ರೈವರ್ ಎಸೋಸಿಯೇಷನ್ ಕಾರ್ಯದರ್ಶಿ ಉದಯ ಮಾಣಿ, ಸೋಶಿಯಲ್ ಮೀಡಿಯಾ ಜಿಲ್ಲಾಧ್ಯಕ್ಷ ರೋಶನ್ ಶೆಟ್ಟಿ , ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷರಾದ ಅಶ್ವತ್ ಕುಮಾರ್ , ಪಂಚಾಯತ್ ಸದಸ್ಯರಾದ ವಿಜಯಧರ್, ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ , ಅಬೂ ಮಹಮದ್ , ಅಶೋಕ್ ಸುವರ್ಣ, ಶಶಿ ರಾಜ್ ಪೂಜಾರಿ , ಶಶಿಧರ ಕೋಟೆ, ಗ್ಯಾರಂಟಿ ಸಮಿತಿಯ ಸದಸ್ಯರಾದ ಆಶಾ ಕರ್ವಾಲ್ಲೊ , ಗಣೇಶ್, ಸೇವಾದಳ ಜಿಲ್ಲಾ ಕಾರ್ಯದರ್ಶಿ ಜ್ಯೋತಿ ನಾಯಕ್ , ಮಹಿಳಾ ಬ್ಲಾಕ್ ಜೊತೆ ಕಾರ್ಯದರ್ಶಿ ಶೋಭಾ ಸಚ್ಚಿದಾನಂದ , ಕುಂದೇಶ್ವರ ಸಮಿತಿಯ ಸದಸ್ಯರಾದ ದಿನೇಶ್ ಬೆಟ್ಟ , ನಾಗರಾಜ ನಾಯಕ್ , ಪ್ರಾಧಿಕಾರ ಸದಸ್ಯರಾದ ಅಲ್ಪಾಜ್ , ಅಲ್ಪಸಂಖ್ಯಾತ ಬ್ಲಾಕ್ ಉಪ ಧ್ಯಕ್ಷರಾದ ವಸಿಂ ಭಾಷಾ , ನಿವೃತ್ತ ಪ್ರಾಧ್ಯಾಪಕರಾದ ಜಾನ್ ಎಫ್ ಡಿಸೋಜಾ , ಪುರಸಭೆಯ ಪ್ರಮುಖರಾದ ರಾಧಾಕೃಷ್ಣ ನಾಯಕ್ , ಕೆ ಪಿ ಅರುಣ್ ಪಟೇಲ್, ಮಧುಕರ ,ವಿವೇಕಾನಂದ , ವೇಲಾ ಬ್ರಗಾಂಜ ,ಎಡಾಲ್ಫ್ ಡಿ ಕೊಸ್ಟಾ , ರಾಘವೇಂದ್ರ ಹೆಗಡೆ , ಜೊಯ್ ರೆಬೆಲೂ , ಆನಂದ ಪೂಜಾರಿ , ಜೋಸೆಫ್ ಡಿಸೋಜಾ , ಡೆಪೋಟಿಲ್ ಕ್ರಾಸ್ಟೋ ,ಕೆ ನಾಗೇಶ ರಾಮ ,ವಿಶ್ವನಾಥ ಇನ್ನಿತರರು ಉಪಸ್ಥಿತರಿದ್ದರು.
ಪ್ರಾಧಿಕಾರ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ ಸ್ವಾಗತಿಸಿ , ನಿರೂಪಿಸಿದರು .ಮಾಜಿ ಪುರಸಭೆ ಸದಸ್ಯರಾದ ಕೇಶವ ಭಟ್ ವಂದಿಸಿದರು.











