ಹೆಮ್ಮಾಡಿ :5 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ಜನತಾ ಪಿಯು ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟ

0
480

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಶಿಕ್ಷಣ ಎಂಬುದು ಬೆಳಕು ಆ ಬೆಳಕು ಹಂಚಿದಷ್ಟು ಅದು ಬೆಳೆಗುತ್ತದೆ. ಆ ಕೆಲಸವನ್ನು ಈ ಸಂಸ್ಥೆ ನಿರಂತರವಾಗಿ ಮಾಡುತ್ತಾ ಬಂದಿದೆ. ಗೆದ್ದರೆ ಖುಷಿ ಪಡಿ ಸೋತರೆ ಅನುಭವದ ಕಿಡಿ ಪ್ರಜ್ವಲಿಸಲಿ ಎಂದು ರಾಷ್ಟ್ರೀಯ ಈಜುಪಟು ಗಿನ್ನಿಸ್ ದಾಖಲೆ ಖ್ಯಾತಿಯ ನಾಗರಾಜ್ ಖಾರ್ವಿ ಕಂಚಗೋಡು ಹೇಳಿದರು.

ಅವರು ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ, ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗದ ಉಡುಪಿ ಇವರ ಆಸರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಬಾಲಕ ಬಾಲಕಿಯರ ಕುಸ್ತಿ ಪಂದ್ಯಾಟದ ಮುಖ್ಯ ಅಭ್ಯಾಗತರಾಗಿ ಮಾತನಾಡಿದ ಅವರು ಜನತಾ ಪಿಯು ಕಾಲೇಜು ಹಲವಾರು ಕ್ರೀಡಾ ಪಟುಗಳ ಬಾಳಿಗೆ ಬೆಳಕಾಗಿದೆ ಎಂದರು.

Click Here

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗದ ಉಪನಿರ್ದೇಶಕರಾದ ಮಾರುತಿಯವರು ಕ್ರೀಡೆಯನ್ನು ಕ್ರೀಡಾ ಸ್ಫೂರ್ತಿಯಿಂದ ಆಡಿದರೆ ಅದರ ಸಂತೋಷ ಕ್ರೀಡಾಪಟುವಿಗೆ ಸಿಗುತ್ತದೆ. ಕ್ರೀಡೆಯಿಂದ ಪ್ರಾಮಾಣಿಕತೆ, ಶಿಸ್ತು, ಹೊಂದಾಣಿಕೆ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ, ಜನತಾ ಸಂಸ್ಥೆ ಕ್ರೀಡೆಗೆ ಹಲವಾರು ವಿದ್ಯಾರ್ಥಿಗಳನ್ನು ರೂಪಿಸಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ ಮಾತನಾಡಿ ದೇಹ ಸದೃಢವಾಗಿದ್ದರೆ ಮನಸ್ಸು ಸದೃಢವಾಗಿರುತ್ತದೆ. ವವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿ ತೊಡಗಿಕೊಂಡರೆ ತಮ್ಮ ಆರೋಗ್ಯದ ಜೊತೆಗೆ ಭವಿಷ್ಯದ ಜೀವನವನ್ನು ಸುಂದರವಾಗಿ ಇಟ್ಟುಕೊಳ್ಳಬಹುದು ಎಂದರು.

ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷರಾದ ಜೀವನ ಕುಮಾರ್ ಶೆಟ್ಟಿ,
ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಸುಕೇಶ್ ಶೆಟ್ಟಿ ಹೊಸಮಠ, ಕುಂದಾಪುರ ತಾಲ್ಲೂಕು ಕ್ರೀಡಾ ಸಂಯೋಜಕರಾದ ರಾಮ ಶೆಟ್ಟಿ, ಜನತಾ ಅನುದಾನಿತ ಪ್ರೌಢ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಜಗದೀಶ್ ಶೆಟ್ಟಿ, ಉಪ ಪ್ರಾಂಶುಶಾಲರಾದ ರಮೇಶ್ ಪೂಜಾರಿ ಉಪಸ್ಥಿತರಿದ್ದರು.

ಪ್ರಾಂಶುಪಾಲರಾದ ಗಣೇಶ್ ಮೊಗವೀರ ಸ್ವಾಗತಿಸಿ,
ದೈಹಿಕ ಶಿಕ್ಷಣ ಉಪನ್ಯಾಸಕರಾದ ಉಮೇಶ್ ನಾಯ್ಕ ವಂದಿಸಿ, ಉದಯ ನಾಯ್ಕ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here