ವಂಡ್ಸೆ ನಿರಾಮಯ ಸೊಸೈಟಿಗೆ ಎಂ.ಎಸ್ ಮಂಜ ಚಾರಿಟೇಬಲ್ ಟ್ರಸ್ಟ್‌ನಿಂದ ಅಂಬ್ಯುಲೆನ್ಸ್ ಕೊಡುಗೆ

0
270

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸಮುದಾಯ ಉಪಶಮನ ಆರೈಕೆ ಕೇಂದ್ರ ವಂಡ್ಸೆ, ನಿರಾಮಯ ಸೊಸೈಟಿಗೆ ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ ರಿ., ಚಿತ್ತೂರು ಕೊಡಮಾಡಿದ ಅಂಬ್ಯುಲೆನ್ಸ್ ನ್ನು ಟ್ರಸ್ಟಿಗೆ ಹಸ್ತಾಂತರ ಕಾರ್ಯಕ್ರಮ, ಸೊಸೈಟಿಯ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಸೆ.1ರಂದು ನಡೆಯಿತು.

ಅಂಬ್ಯುಲೆನ್ಸ್ ನ್ನು ಶೋ ರೂಂನಿಂದ ಟ್ರಸ್ಟಿಗೆ ಸ್ವೀಕಾರ ಮಾಡಿದ ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇವತ್ತಿನ ಕಾಲಘಟ್ಟಕ್ಕೆ ಅನುಗುಣವಾಗಿ ಆರೋಗ್ಯ ಸೇವೆಯನ್ನು ಮನೆಗೆ ತಲುಪಿಸುವಲ್ಲಿ ಈ ಯೋಜನೆ ಪ್ರಮುಖವಾಗುತ್ತದೆ. ಕರ್ನಾಟಕದಲ್ಲಿ ಪ್ರಥಮವಾಗಿ ಅನುಷ್ಟಾನವಾಗುತ್ತಿರುವ ಈ ಸಮುದಾಯ ಉಪಶಮನ ಆರೈಕೆ ಕೇಂದ್ರ ಯಶಸ್ವಿಯಾಗಿ ಮುನ್ನೆಡೆಯಲಿ. ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರಕ್ಕೆ ಸ್ಪಂದಿಸುವುದು ಅತ್ಯಂತ ಅಗತ್ಯವಾಗಿದೆ. ಇದರಿಂದ ಆರ್ಹರಿಗೆ ಪ್ರಯೋಜನ ಸಿಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿರಾಮಯ ಸೊಸೈಟಿ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಅವರು ಮಾತನಾಡಿ, ಈಗಾಗಲೇ ಕೇರಳದಲ್ಲಿ ಯಶಸ್ವಿಯಾಗಿ ಅನುಷ್ಠಾನ ಆಗುತ್ತಿರುವ ಸಮುದಾಯ ಉಪಶಮನ ಆರೈಕೆ ಕೇಂದ್ರ ಕರ್ನಾಟಕದಲ್ಲಿ ಪೈಲೆಟ್ ಪ್ರಾಜೆಕ್ಟ್ ಆಗಿ ವಂಡ್ಸೆಯಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಅನುಷ್ಟಾನ ಆಗುತ್ತಿದೆ. ವಂಡ್ಸೆ, ಚಿತ್ತೂರು, ಇಡೂರು-ಕುಂಜ್ಞಾಡಿ, ಆಲೂರು, ಹಕ್ಲಾಡಿ, ಹೆಮ್ಮಾಡಿ, ಕೆರಾಡಿ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದೆ. ಈ ತಿಂಗಳ ಅಂತ್ಯದೊಳಗೆ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ ಎಂದರು.

Click Here

ನಿರಾಮಯ ಸೊಸೈಟಿಯ ಗೌರವ ಸದಸ್ಯರಾದ ಡಾ.ಅತುಲ್ ಕುಮಾರ್ ಶೆಟ್ಟಿ, ಡಾ.ರಾಜೇಶ ಬಾಯರಿ ಚಿತ್ತೂರು, ಟಿ.ಎಚ್.ಓ ಡಾ.ಪ್ರೇಮಾನಂದ, ಕೆ.ಎಚ್.ಪಿ.ಟಿ (ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್) ಸಂಸ್ಥೆಯ ಸತ್ಯಶ್ರೀ, ಅರುವು ಕೊಲಾಬರೇಟರಿ ಸಂಸ್ಥೆ ಬೆಂಗಳೂರು ಇದರ ನವೀನ್, ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಅವಿನಾಶ್, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ರವಿರಾಜ್ ಶೆಟ್ಟಿ, ಆಲೂರು ಗ್ರಾ.ಪಂ. ಅಧ್ಯಕ್ಷ ರಾಜೇಶ ದೇವಾಡಿಗ, ಹಕ್ಲಾಡಿ ಗ್ರಾ.ಪಂ ಉಪಾಧ್ಯಕ್ಷ ಸುಭಾಶ ಶೆಟ್ಟಿ, ವಂಡ್ಸೆ ಗ್ರಾ.ಪಂ. ಉಪಾಧ್ಯಕ್ಷ ಗೋವರ್ಧನ್ ಜೋಗಿ, ಚಿತ್ತೂರು ಗ್ರಾ.ಪಂ. ಉಪಾಧ್ಯಕ್ಷೆ ಸುಬ್ಬು, Pallium India ತ್ರಿವೆಂಡ್ರಮ್ ಇಲ್ಲಿನ ತರಬೇತುದಾರರಾದ ಡಾ.ಶಿಥಲ್ ರಾಜ್, ಡಾ.ಅರ್ಜುನ್, ಶೈನಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಿ.ಎಚ್.ಓ ಉಪಸ್ಥಿತರಿದ್ದರು.

ನಿರಾಮಯ ಸೊಸೈಟಿ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಶಿಕ್ಷಕ ಪ್ರತಾಪ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ನಿರಾಮಯ ಸೊಸೈಟಿಯ ಆರು ಮಂದಿ ಸಿಬ್ಬಂದಿಗಳು, ನಾಲ್ವರು ವೈದ್ಯಾಧಿಕಾರಿಗಳು, 9 ಮಂದಿ ಸಿ.ಎಚ್.ಓಗಳಿಗೆ ತರಬೇತಿ ನೀಡಲಾಯಿತು.

Click Here

LEAVE A REPLY

Please enter your comment!
Please enter your name here