ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕಮಲಶಿಲೆ ಗ್ರಾಮದ ಬರೆಗುಂಡಿ ನಿವಾಸಿ, ಸಿದ್ದಾಪುರ ಚಾತ್ರ ಎಂಟರ್‍ಪ್ರೈಸಸ್ ಮಾಲಕ ಉದಯ ಚಾತ್ರ (43) ಅವರು ಸೆ. 17ರಂದು ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಉದಯ ಚಾತ್ರ ಅವರು ಮೃದು ಭಾಷಿಗರಾಗಿದ್ದು, ಎಲ್ಲಾರೊಂದಿಗೆ ಚನ್ನಾಗಿ ಬೇರೆಯುತ್ತಿದ್ದರು. ತನ್ನ ನಿವಾಸವಾಗಿದ್ದ ಬರೆಗುಂಡಿಯಿಂದ ಸೆ. 17ರಂದು ತನ್ನ ತಂದೆ, ತಾಯಿ ಹಾಗೂ ಪತ್ನಿಯ ಜತೆಯಲ್ಲಿ ಕಮಲಶಿಲೆಯಲ್ಲಿ ನಡೆಯುತ್ತಿದ್ದ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಗೆ ಬಂದಿದ್ದರು. ತಂದೆ, ತಾಯಿ ಹಾಗೂ ಪತ್ನಿಯನ್ನು ಸಂಘದ ವಾರ್ಷಿಕ ಮಹಾಸಭೆಯಲ್ಲಿ ಬಿಟ್ಟು, ಸಿದ್ದಾಪುರದಲ್ಲಿರುವ ತನ್ನ ಮಾಲಿಕತ್ವದ ಚಾತ್ರ ಎಂಟರ್‍ಪ್ರೈಸಸ್ ತೆರಳುವುದ್ದಾಗಿ ಹೇಳಿ ಹೊರಟಿದ್ದರು. ಅವರು ಕಮಲಶಿಲೆಯಿಂದ ತನ್ನ ಅಂಗಡಿಗೆ ತೆರಳದೇ, ನೆರವಾಗಿ ಮನೆ ತೆರಳಿದ್ದರು. ಮನೆಗೆ ಬಂದ ಅವರು ಮನೆಯ ಮಾಹಡಿ ಮೇಲಿನ ಕೋಣೆಗೆ ತೆರಳಿ, ಫ್ಯಾನಿನ ಕಬ್ಬಿಣದ ಕೊಕ್ಕೆಗೆ ನೈಲಾನ್ ಹಗ್ಗದಿಂದ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ತಂದೆ, ತಾಯಿ ಹಾಗೂ ಪತ್ನಿ ಅವರು ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಸರ್ವ ಸದಸ್ಯರ ಮಹಾಸಭೆಯನ್ನು ಮುಗಿಸಿಕೊಂಡು ಮನೆಗೆ ತೆರಳಿದ್ದಾಗ, ಮನೆಯಲ್ಲಿ ಉದಯ ಚಾತ್ರರ ವಾಹನ ಇರುವುದು ಗಮನಕ್ಕೆ ಬಂದಿದೆ. ಮನೆಗೆ ಬೀಗ ಕೂಡ ಹಾಕಿದ ಸ್ಥಿತಿಯಲ್ಲಿಯೇ ಇತ್ತು. ಮನೆಯವರು ಮನೆ ಸುತ್ತಮುತ್ತ ಹಾಗೂ ಒಳಗೆ ಹುಡುಕಾಡಿದ್ದರು. ಮೊದಲನೆ ಮಾಹಡಿಯ ಕೋಣೆಗೆ ಹೋಗಿ ನೋಡುವಾಗ, ನೇಣು ಬಿಗಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಿದ್ದಾಪುರದಲ್ಲಿರುವ ಚಾತ್ರ ಎಂಟರ್‍ಪ್ರೈಸಸ್ ಚೆನ್ನಾಗಿ ವ್ಯವಹಾರ ನಡೆಯುತ್ತಿತ್ತು. ಮನೆಯಲ್ಲಿ ಸಾಕಷ್ಟು ಕೃಷಿ ಕೂಡ ಇದೆ. ಆರ್ಥಿಕವಾಗಿ ಕೂಡ ಸಬಲರಾಗಿದ್ದರು. ಮಕ್ಕಳು ಕೂಡ ಚನ್ನಾಗಿ ಓದುತ್ತಿದ್ದಾರೆ ಮಾಹಿತಿ ತಿಳಿದುಬಂದಿದೆ. ಸಾವಿಗೆ ಮಾತ್ರ ನಿಖರವಾದ ಕಾರಣಗಳು ತಿಳಿದುಬಂದಿಲ್ಲ.
ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಮಕ್ಕಳಿಬ್ಬರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪತ್ನಿ ಅಕ್ಷರ ಚಾತ್ರ(40) ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











