ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ತಾಂತ್ರಿಕ ಸಮಸ್ಯೆಯಿಂದ ಬೋಟ್ ದಡಕ್ಕೆ ಅಪ್ಪಳಿಸಿ ಅಪಾರ ಹಾನಿಗೊಳಗಾದ ಘಟನೆ ಹಂಗಾರಕಟ್ಟೆ ಸಮೀಪ ಸಂಭವಿಸಿದೆ.
ಕೋಡಿಬೆಂಗ್ರೆಯ ಪ್ರಕಾಶ್ ಕುಂದರ್ ಅವರಿಗೆ ಸೇರಿದ ಮಹಾಕಾಳಿ ಎನ್ನುವ ಹೆಸರಿನ ಬೋಟ ಸೆ. 17ರಂದು ಬೆಳಿಗ್ಗೆ ಕೋಡಿ ಬೆಂಗ್ರೆ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದು ಅಪರಾಹ್ನ ವೇಳೆಗೆ ಹಂಗಾರಕಟ್ಟೆ ಬಂದರಿನ ಸಮೀಪ ಮೀನುಗಾರಿಕೆ ಮಾಡುತ್ತಿರುವಾಗ ತಾಂತ್ರಿಕ ಸಮಸ್ಯೆಯಿಂದ ಇಂಜಿನ್ ಬಂದ್ ಆಗಿರುತ್ತದೆ. ನಂತರ ಇಂಜಿನ್ ಚಾಲು ಮಾಡಲು ಎಷ್ಟು ಪ್ರಯತ್ನ ಪಟ್ಟರೂ ಚಾಲು ಆಗಿರುವುದಿಲ್ಲ. ಈ ಸಂದರ್ಭದಲ್ಲಿ ಗಾಳಿ ಮತ್ತು ಅಲೆಗಳ ರಭಸಕ್ಕೆ ಬೋಟ್ ತುಂಬಾ ತೀರಕ್ಕೆ ಬಂದು ಕೋಡಿ ಕನ್ಯಾನ ಗ್ರಾಮದ ಕೋಡಿ ಸಮುದ್ರಬದಿ ದಡಕ್ಕೆ ಅಪ್ಪಳಿಸಿತು. ಬೋಟ್ ನಲ್ಲಿದ್ದ ಐದು ಮಂದಿ ಅಪಾಯದಿಂದ ಪಾರಾದರು. ಆದರೆ ಬೋಟ್ ಮತ್ತು ಇನ್ನಿತರ ಸಾಮಾಗ್ರಿಗಳ ಹಾಳಾಗಿ ಸುಮಾರು 10 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











