ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘವು ವರ್ಷಾಂತ್ಯಕ್ಕೆ ರೂ.54,58,17,835.64 ಠೇವಣಾತಿ ಹೊಂದಿದ್ದು, ವರದಿ ವರ್ಷದ ಕೊನೆಗೆ ರೂ.1,04,57,493.55 ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇಕಡ 15 ಡಿವಿಡೆಂಡ್ ನೀಡಲಾಗುವುದು ಎಂದು ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ತಿಳಿಸಿದರು.
ಸೆ.23ರಂದು ವಂಡ್ಸೆಯ ಶ್ರಿಯಾ ಕನ್ವೆನ್‍ಷನ್ ಹಾಲ್‍ನಲ್ಲಿ ನಡೆದ ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘವು ಒಟ್ಟು ಸದಸ್ಯರಿಂದ ರೂ.3,36,97,395 ಪಾಲು ಬಂಡವಾಳವನ್ನು ಸಂಗ್ರಹಿಸಿದೆ. ವರದಿ ವರ್ಷದಲ್ಲಿ ರೂ.91,17,03,282 ಸಾಲ ನೀಡಲಾಗಿದೆ. ಸರಕಾರ ರೂಪಿಸಿದ ಕಿಸಾನ್ ಕ್ರೆಡಿಟ್ ಸಾಲ ಯೋಜನೆಯಲ್ಲಿ 2,190 ರೈತ ಸದಸ್ಯರಿಗೆ ರೂ.40,30,21000 ಸಾಲ ನೀಡಲಾಗಿದೆ ಎಂದರು.
ವರ್ಷಾಂತ್ಯಕ್ಕೆ ಸಂಘದ ಸ್ಥಿರಾಸ್ತಿ ಮತ್ತು ಚರಾಸ್ತಿಗಳ ಒಟ್ಟು ಮೊತ್ತವು ರೂ.2,11,05,524.55 ಆಗಿದೆ. ರೂ.3,24,000 ಸಹಾಯಧನ ನೀಡಲಾಗಿದೆ. ರೂ.5,58,67,071.98 ನಿಧಿಗಳು, ರೂ.86,07,882.32 ಇತರೆ ನಿಧಿಗಳು, ರೂ.59,32,604.91 ಸವಕಳಿ ನಿಧಿಯನ್ನು ಹೊಂದಿದೆ. ವರದಿ ವರ್ಷದ ಅಂತ್ಯಕ್ಕೆ ವಿನಿಯೋಗವು 20,64,51,087.26 ಆಗಿದೆ ಎಂದರು.
ಸಭೆಯ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಸದಸ್ಯರ ಪ್ರಶ್ನೆಗಳಿಗೆ ಅಧ್ಯಕ್ಷರು ಸಮರ್ಪಕ ಉತ್ತರ ಒದಗಿಸಿದರು.
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸಂಜೀವ ಪೂಜಾರಿ ವಂಡ್ಸೆ, ನಿರ್ದೇಶಕರಾದ ಜಗನ್ನಾಥ ಶೆಟ್ಟಿ ಹೊಸೂರು, ರಾಮಚಂದ್ರ ಮಂಜ ಚಿತ್ತೂರು, ರಾಜಾರಾಮ ಶೆಟ್ಟಿ ಇಡೂರು-ಕುಂಜ್ಞಾಡಿ, ಶೇಖರ ಶೆಟ್ಟಿ ಬೆಳ್ಳಾಲ, ಪ್ರಭಾಕರ ಶೆಟ್ಟಿ ಕೆರಾಡಿ, ಗುಂಡು ಜಿ.ಪೂಜಾರಿ ವಂಡ್ಸೆ, ಅರುಣ್ ಕುಮಾರ್ ಶೆಟ್ಟಿ ಹೊಸೂರು, ಶ್ರೀಮತಿ ಜಲಜಾಕ್ಷಿ ಶೆಡ್ತಿ ಹೊಸೂರು, ಶ್ರೀಮತಿ ಅಂಬಿಕಾ ಶೆಡ್ತಿ ವಂಡ್ಸೆ, ರಾಜು ನಾಯ್ಕ ಇಡೂರು-ಕುಂಜ್ಞಾಡಿ, ಸಂತೋಷ ನಾಯ್ಕ ಕೆರಾಡಿ, ವೃತ್ತಿಪರ ನಿರ್ದೇಶಕರಾದ ವಂಡಬಳ್ಳಿ ಜಯರಾಮ ಶೆಟ್ಟಿ, ಕರುಣಾಕರ ಶೆಟ್ಟಿ ಹೆಟ್ನಬೈಲು, ವಲಯ ಮೇಲ್ವಿಚಾರಕ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹೈನುಗಾರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಜನಾಕ್ಷಿ ಶೆಟ್ಟಿ ಹೊಸೂರು ಇವರನ್ನು ಸನ್ಮಾನಿಸಲಾಯಿತು.
ಎಸ್.ಎಸ್.ಎಲ್.ಸಿ, ಪಿಯುಸಿ, ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ವೈದ್ಯಕೀಯ ನೆರವು ಹಸ್ತಾಂತರಿಸಲಾಯಿತು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸುಮತಿ ಶೆಟ್ಟಿ ವಿದ್ಯಾರ್ಥಿವೇತನ, ಆರೋಗ್ಯ ಸಹಾಯಧನ ಫಲಾನುಭವಿಗಳ ಪಟ್ಟಿ ವಾಚಿಸಿದರು. ಸಂಘದ ಸಿಬ್ಬಂದಿಗಳಾದ ಶೃತಿ ಮತ್ತು ಜ್ಯೋತಿ ಪ್ರಾರ್ಥನೆ ಮಾಡಿದರು. ವೃತ್ತಿಪರ ನಿರ್ದೇಶಕರಾದ ವಂಡಬಳ್ಳಿ ಜಯರಾಮ ಶೆಟ್ಟಿ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಸಂಜೀವ ಪೂಜಾರಿ ವಂಡ್ಸೆ ವಂದಿಸಿದರು.











