ಕುಂದಾಪುರ ಮಿರರ್ ಸುದ್ದಿ…
ಕೋಟ: ಡಾ.ಶಿವರಾಮ ಕಾರಂತ ಥೀಂ ಪಾರ್ಕ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ಕಾರಂತ ಥೀಂ ಪಾರ್ಕ ವಿನ್ಯಾಸ ಹಾಗೂ ಇಲ್ಲಿನ ಚಟುವಟಿಕೆಗಳನ್ನು ವಿಕ್ಷೀಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಒಂದು ಸಮಾಜ ಯಾವಾಗಲೂ ಕ್ರೀಯಾಶೀಲವಾಗಿ ಉಳಿಯಬೇಕೆಂದರೆ ಹಿರಿಯ ಸಾಧಕರನ್ನು ಸದಾ ಸ್ಮರಿಸುತ್ತಿರಬೇಕು, ಹಿರಿಯರ ಪರಿಶ್ರಮದ ಹೋರಾಟ, ಒಳ್ಳೆಯ ವ್ಯಕ್ತಿಗಳು ಸಂವನಗೊಳಿಸುವ ವಿಚಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರೇರಣೆ ಪಡೆಯುವಂತ್ತಾಗಬೇಕು. ಇದರಿಂದ ಸಮಾಜಮುಖಿ ಕಾರ್ಯಕ್ಕೆ ಮುನ್ನುಡಿ ಬರೆಯಲು ಸಾಧ್ಯ, ಅಂತಹ ಸಾಲಿನಲ್ಲಿ ಕಾರಂತರು ನಿಲ್ಲುತ್ತಾತೆ ಅವರು ವಿಶ್ವಮಾನ್ಯರು ತಮ್ಮ ಜೀವಿತ ಅವಧಿಯಲ್ಲಿ ನೇರ ನಡೆನುಡಿಯ ಜೊತೆ ನಿಷ್ಟುರವಾದಿಯಾಗಿ ಬದುಕಿದರು.ಶುದ್ಧ,ನೈಜ ಗ್ರಾಮೀಣ ಬದುಕಿನ ಪ್ರತೀಕ ಡಾ.ಶಿವರಾಮ ಕಾರಂತರು ಎನ್ನಲು ಅತೀವ ಹೆಮ್ಮೆಯಾಗುತ್ತವೆ,ತಮ್ಮ ಲೇಖನದ ಮೂಲಕ ಗ್ರಾಮ್ಯ ಸೋಗಡನ್ನು ಕಾದಂಬರಿಗಳ ಹಾಗೂ ಕಲೆಗಳ ಮೂಲಕ ಜಗತ್ತಿಗೆ ಪ್ರಸ್ತುತಿ ಪಡಿಸಿದರು. ತಾವು ಅನುಭವಿಸಿದನ್ನು ಸಮಾಜಕ್ಕೆ ಮಾದರಿಯಾಗಿ ನೀಡಿದ್ದಾರೆ ಅವರ ಯಕ್ಷಗಾನವನ್ನು ಅನುಭವಿಸುವ ರೀತಿನೀತಿ ಕಣ್ಣೆದುರಿಗೆ ಬಂದಂತೆ ತೋರ್ಪಡಿಸುತ್ತದೆ, ಇಲ್ಲಿನ ಪ್ರತಿಷ್ಠಾನ ಕಾರ್ಯ ಶ್ಲಾಘನೀಯ ಇದರ ಅಭಿವೃದ್ಧಿ ಕೈಂಕರ್ಯದಲ್ಲಿ ಸರಕಾರದ ಸದಾ ಸಹಕಾರ ನೀಡುತ್ತದೆ.
ಈ ಸಂದರ್ಭದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಸನ್ಮಾನಿಸಲಾಯಿತು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾಧಿಕಾರಿ ಕೂರ್ಮ ಎಂ ರಾವ್, ಕುಂದಾಪುರ ಎ.ಸಿ ರಾಜು,ಬ್ರಹ್ಮಾವರ ತಹಶಿಲ್ದಾರ್ ರಾಜಶೇಖರಮೂರ್ತಿ, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಅಶ್ವಿನಿದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಕೋಡಿ ಗ್ರಾ.ಪಂ ಅಧ್ಯಕ್ಷ ಪ್ರಭಾಕರ ಮೆಂಡನ್,ಸಾಲಿಗ್ರಾಮ ಪ.ಪಂ ಉಪಾಧ್ಯಕ್ಷೆ ಅನುಸೂಯ ಹೇರ್ಳೆ, ಕಾರಂತ ಪ್ರತಿಷ್ಠಾನದ ಸದಸ್ಯ ಸುಬ್ರಾಯ ಆಚಾರ್ಯ, ಸುಶೀಲಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾರಂತ ಥೀಂ ಪಾರ್ಕ ಮೇಲುಸ್ತುವಾರಿ ಪೂರ್ಣಿಮಾ ಸ್ವಾಗತಿಸಿ ನಿರೂಪಿದರು.











