ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಈ ದೇಶದಲ್ಲಿ ಗಾಂಧಿಯವರು ಪ್ರತಿಪಾದಿಸಿದ ಸತ್ಯ ಮತ್ತು ಅಹಿಂಸೆಯ ಬದಲಿಗೆ ಸುಳ್ಳು ಮತ್ತು ಹಿಂಸೆಯ ಪ್ರತಿಪಾದನೆ ನಡೆಯುತ್ತಿದೆ. ಅವೈಜ್ಞಾನಿಕ ಜಿಎಸ್‌ಟಿ ಪರಿಣಾಮವಾಗಿ ಎರಡು ಲಕ್ಷ ಸಣ್ಣ ಮಧ್ಯಮ ಗಾತ್ರದ ಕೈಗಾರಿಕೆಗಳು ಮುಚ್ಚಿವೆ. ದೊಡ್ಡ ಉದ್ಯಮಿಗಳು ಮತ್ತಷ್ಟು ಬೆಳೆದಿದ್ದಾರೆ. ಎಲ್ಲಾ ತಪ್ಪುಗಳನ್ನು ಸರಿ ಎಂದು ಪ್ರತಿಪಾದನೆ ಮಾಡುವ ಚಾಳಿ ಆರಂಭಗೊಂಡಿದೆ. ಗಾಂಧಿ ತಪ್ಪು ಅವರನ್ನು ಕೊಂದವರೆ ಶ್ರೇಷ್ಠ ಎಂಬ ಪ್ರತಿಪಾದನೆ ಆರಂಭಗೊಂಡಿದೆ. ಈ ಕುರಿತು ಚಿಂತನೆ ಅಗತ್ಯ” ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯೆ ಜುಡಿತ್ ಮೆಂಡೋನ್ಸಾ ಇವರು ಹೇಳಿದರು.
ಅವರು ಇಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿಯವರು ವಹಿಸಿದ್ದರು.
ಸಭೆಯಲ್ಲಿ ರಾಜ್ಯ ಐಟಿ ಸೆಲ್ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ , ಜಿಲ್ಲಾ ವಕ್ತಾರ ವಿಕಾಸ ಹೆಗ್ಡೆ , ಪುರಸಭಾ ಸದಸ್ಯ ಶ್ರೀಧರ್ ಶೇರಿಗಾರ್ , ಪ್ರಭಾವತಿ ಶೆಟ್ಟಿ , ಅಬ್ಬು ಮಹಮದ್ , ಸದಾನಂದ ಖಾರ್ವಿ, ಪಂಚಾಯತ್ ಸದಸ್ಯರಾದ ವಿಜಯಾಧರ್ ಕೆ ವಿ , ಸುಭಾಷ್ ಪೂಜಾರಿ , ರಿಯಾಜ್ ಕೋಡಿ , ಮೇಬಲ್ ಡಿಸೋಜಾ , ವೇಲಾ ಬ್ರಗಾಂಜ, ಅರುಣ್ ಪಟೇಲ್ , ಮಧುಕರ , ಜೋಸೆಫ್ ಡಿಸೋಜಾ , ಆಲ್ವಿನ್ ಅಲ್ಮೇಡಾ , ಕೆ ಶಿವಕುಮಾರ್ , ಕೆಎಸ್ ವಿಜಯ್ , ಎಡಾಲ್ಫ್ ಡಿ ಕೋಸ್ಟಾ , ವಿವೇಕಾನಂದ ಚರ್ಚ್ ರಸ್ತೆ , ಸುಧೀಂದ್ರ ವಕ್ವಾಡಿ , ಕೆ ನಾಗರಾಜ್ ನಾಯಕ್ , ಜನಾರ್ದನ ಖಾರ್ವಿ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ರವರು ನಿರೂಪಿಸಿದರು. ಕೆಡಿಪಿ ಸದಸ್ಯ ವಕ್ವಾಡಿ ರಮೇಶ್ ಶೆಟ್ಟಿಯವರು ಸ್ವಾಗತಿಸಿದರು. ಪುರಸಭಾ ಸದಸ್ಯ ಅಶೋಕ್ ಸುವರ್ಣ ವಂದಿಸಿದರು.












