ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಭಾರೀ ಗಾತ್ರದ ಮರವೊಂದು ಸರಕಾರಿ ಕಟ್ಟಡವೊಂದರ ಮೇಲೆ ಬಿದ್ದ ಘಟನೆ ಗುರುವಾರ ಸಂಜೆ ಕುಂದಾಪುರದಲ್ಲಿ ಸಂಭವಿಸಿದೆ. ಸರಕಾರಿ ರಜೆಯಾಗಿದ್ದರಿಂದ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಕುಂದಾಪುರದ ಹಳೆಯ ತಾಲೂಕು ಕಚೇರಿ ಬಳಿಯ ಅಂಚೆ ಕಚೇರಿ ಇರುವ ಕಟ್ಟಡದ ಮೇಲೆ ಈ ಭಾರೀ ಗಾತ್ರದ ಮರ ಮುರಿದು ಬಿದ್ದಿದೆ. ಆ ಸಮಯದಲ್ಲಿ ಅಲ್ಲಿ ಯಾರೂ ಇಲ್ಲದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಅ.2 ವಿಜಯದಶಮಿ ಹಾಗೂ ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಸರಕಾರಿ ರಜೆ ಇತ್ತು. ಆದ್ದರಿಂದ ಅಲ್ಲಿ ಯಾರು ಇರಲಿಲ್ಲ. ಇಲ್ಲದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.
ಸುದ್ದಿ ತಿಳಿಯುತ್ತಿದ್ದಂತೆ ಕುಂದಾಪುರ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.











