ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ: ಇಲ್ಲಿನ ಪುರಸಭಾ ಮುಖ್ಯ ರಸ್ತೆಯ ಪಾರಿಜಾತ ಹೋಟೆಲ್ ಮುಂಭಾಗದಲ್ಲಿ ನೂತನವಾಗಿ ಆರಂಭಗೊಂಡ ಆರ್.ಕೆ. ಆರ್ಥೋ & ಹ್ಯಾಂಡ್ ಕ್ಲಿನಿಕ್ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿ ಮಾತನಾಡಿ ಕುಂದಾಪುರ ಭಾಗಕ್ಕೆ ಇದೊಂದು ಅವಶ್ಯಕತೆ ಇರುವ ಕ್ಲಿನಿಕ್ ವಾಗಿರುವುದರಿಂದ ಕುಂದಾಪುರ ಜನತೆಗೆ ಒಂದು ಉತ್ತಮ ಸೇವೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಆರ್.ಕೆ.ಆರ್ಥೋ & ಹ್ಯಾಂಡ್ ಕ್ಲಿನಿಕ್ ಮುಖ್ಯಸ್ಥರಾದ ಡಾ!! ರಂಜಿತ್ ಕುಮಾರ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.
ಗಿರಿಜಾ ಸರ್ಜಿಕಲ್& ಹೆಲ್ತ್ ಕೇರ್ ರವೀಂದ್ರ ಶೆಟ್ಟಿ ಪ್ರಸ್ತಾವಿಕ ಮಾತನಾಡಿ, ಕಾರ್ಯಕ್ರಮವನ್ನು ನಿರೂಪಿಸಿದರು.











